ಪೋಪ್ ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರಕ್ಕೆ ನೆರವಾದ, ಭಾಗವಹಿಸಿದವರಿಗೆ ಧನ್ಯವಾದ ತಿಳಿಸಿದ ಕಾರ್ಡಿನಲ್ಲುಗಳು

ಪೋಪ್ ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರಕ್ಕೆ ಶನಿವಾರ ಆಗಮಿಸಿದ ಎಲ್ಲಾ ಧಾರ್ಮಿಕ ಹಾಗೂ ರಾಜಕೀಯ ನಾಯಕರುಗಳಿಗೆ ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರು ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಕಾರ್ಯವನ್ನು ಯಾವುದೇ ತೊಂದರೆಗಳು ಆಗದಂತೆ ಅತ್ಯುತ್ತಮವಾಗಿ ನಿರ್ವಹಿಸಲು ನೆರವಾದ ನಾಗರೀಕ ಅಧಿಕಾರಿಗಳಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಶನಿವಾರ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಚರ್ಚುಗಳ ಮುಖ್ಯಸ್ಥರು ಮತ್ತು ಇಸ್ಲಾಂ, ಯಹೂದಿ ಮತ್ತು ಇತರ ಧರ್ಮಗಳ ಪ್ರತಿನಿಧಿಗಳು ಹಾಗೂ ಹಾಜರಿದ್ದ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಿ ನಿಯೋಗಗಳಿಗೆ ಕಾರ್ಡಿನಲ್'ಗಳ ಪರಿಷತ್ತು ಧನ್ಯವಾದಗಳನ್ನು ಅರ್ಪಿಸಿದೆ.

"ಶಾಂತವಾಗಿ ಮತ್ತು ಕ್ರಮಬದ್ಧವಾಗಿ" ಘಟನೆಗಳು ನಡೆಯಲು ಕಾರಣರಾದ "ಇಟಾಲಿಯನ್ ಅಧಿಕಾರಿಗಳು, ರೋಮ್ ನಗರ, ಭದ್ರತಾ ಸೇವೆಗಳು, ನಾಗರಿಕ ರಕ್ಷಣಾ ಪಡೆಗಳು, ಮಾಧ್ಯಮಗಳು ಮತ್ತು ಪವಿತ್ರ ಪೀಠ ಮತ್ತು ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್ ನೌಕರರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ" ಕಾರ್ಡಿನಲ್ಸ್ ಧನ್ಯವಾದಗಳನ್ನು ಅರ್ಪಿಸಿದರು.

ಅಂತಿಮವಾಗಿ ಯುವ ಜನರ ಜ್ಯೂಬಿಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಹದಿಹರೆಯದವರಿಗೆ ಕಾರ್ಡಿನಲ್ಲುಗಳ ಪರಿಷತ್ತು ಧನ್ಯವಾದಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

29 ಏಪ್ರಿಲ್ 2025, 16:56