ಫೋಪ್ ಫ್ರಾನ್ಸಿಸ್ ಅವರನ್ನು ಸ್ಮರಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ವರದಿ: ವ್ಯಾಟಿಕನ್ ನ್ಯೂಸ್
ಮಂಗಳವಾರ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಸ್ಮರಿಸುವ ವಿಶೇಷ ಸ್ಮರಣಾರ್ಥ ಕಾರ್ಯಕ್ರಮದಲ್ಲಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ದಿವಂಗತ ಪೋಪ್ ಅವರನ್ನು 'ಯುದ್ಧದ ಜಗತ್ತಿನಲ್ಲಿ ಶಾಂತಿಯ ಧ್ವನಿಯಾಗಿ', ನಮ್ಮ ನೈತಿಕ ಕರ್ತವ್ಯಗಳನ್ನು ನೆನಪಿಸುತ್ತಾ ಮತ್ತು ನಿರಂತರ 'ಭರವಸೆಯ ಸಂದೇಶವಾಹಕರಾಗಿದ್ದರು' ಎಂದು ಶ್ಲಾಘಿಸಿದರು.
ಏಪ್ರಿಲ್ 21, ಈಸ್ಟರ್ ಸೋಮವಾರದಂದು ಪೋಪ್ ಫ್ರಾನ್ಸಿಸ್ ಅವರ ನಿಧನದ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯು ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ.
ಮಂಗಳವಾರ, ಏಪ್ರಿಲ್ 29 ರಂದು, ನ್ಯೂಯಾರ್ಕ್‌ನಲ್ಲಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಪೋಪ್ ಫ್ರಾನ್ಸಿಸ್ ಅವರನ್ನು ಶ್ಲಾಘಿಸಿದರು ಮತ್ತು ಪ್ರಪಂಚದ ಮೇಲೆ ಅವರ ಪ್ರಭಾವವನ್ನು ಸ್ಮರಿಸಿದರು.
"ಪವಿತ್ರ ಪೋಪ್ ಫ್ರಾನ್ಸಿಸ್ ಅವರು ನಂಬಿಕೆಯ ವ್ಯಕ್ತಿ ಮತ್ತು ಎಲ್ಲಾ ನಂಬಿಕೆಗಳ ನಡುವೆ ಸೇತುವೆ ಕಟ್ಟುವವರಾಗಿದ್ದರು" ಎಂದು ಅವರು ಹೇಳಿದರು, "ಅವರು ಭೂಮಿಯ ಮೇಲಿನ ಅತ್ಯಂತ ಅಂಚಿನಲ್ಲಿರುವ ಜನರ ಪ್ರತಿಪಾದಕರಾಗಿದ್ದರು" ಎಂದು ಗಮನಿಸಿದರು.
ಇದಲ್ಲದೆ, ದಿವಂಗತ ಪೋಪ್ "ವಿಭಜನೆಯ ಜಗತ್ತಿನಲ್ಲಿ ಸಮುದಾಯದ ಧ್ವನಿಯಾಗಿದ್ದರು," "ಕ್ರೌರ್ಯದ ಜಗತ್ತಿನಲ್ಲಿ ಕರುಣೆಯ ಧ್ವನಿಯಾಗಿದ್ದರು" ಮತ್ತು "ಯುದ್ಧದ ಜಗತ್ತಿನಲ್ಲಿ ಶಾಂತಿಯ ಧ್ವನಿಯಾಗಿದ್ದರು" ಎಂದು ಗುಟೆರೆಸ್ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ, ಅವರು ವಿಶ್ವಸಂಸ್ಥೆಯ ಕುಟುಂಬದ ಪರವಾಗಿ, ಕ್ಯಾಥೋಲಿಕ್ ಸಮುದಾಯಕ್ಕೆ ಮತ್ತು ಪ್ರಪಂಚದಾದ್ಯಂತದ ಇತರ ಅನೇಕರಿಗೆ "ಈ ಅಪಾರ ನಷ್ಟದಿಂದ ದುಃಖಿತರಾಗಿದ್ದೇವೆ" ಎಂದು ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುವುದಾಗಿ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು "ಉಕ್ರೇನ್ ಮತ್ತು ಗಾಜಾದಂತಹ ಯುದ್ಧ ವಲಯಗಳಲ್ಲಿ ಸಿಕ್ಕಿಬಿದ್ದ ಅಮಾಯಕರ ಪರವಾಗಿ ದೃಢನಿಶ್ಚಯದಿಂದ ನಿಂತರು" ಎಂದು ಆಂಟೋನಿಯೊ ಗುಟೆರೆಸ್ ಒತ್ತಿ ಹೇಳಿದರು. ಯುದ್ಧಗಳ ಸಂದರ್ಭದಲ್ಲಿ ವಿಶೇಷವಾಗಿ ಪ್ಯಾಲೆಸ್ತೇನ್ ಹಾಗೂ ಉಕ್ರೇನ್ ಜನತೆಯೊಂದಿಗೆ ಐಕ್ಯಮತ್ಯವನ್ನು ಸಾಧಿಸಿದ್ದರು.