Patti Smith meets Pope Francis during a General Audience on the 10th of April 2013 Patti Smith meets Pope Francis during a General Audience on the 10th of April 2013 

ಪ್ಯಾಟಿ ಸ್ಮಿತ್: ವಿಶ್ವಗುರು ಫ್ರಾನ್ಸಿಸ್ ರವರು ಕಲ್ಲುಗಳ ನಡುವೆ ಕಾಡುಸೇವಂತಿಗೆಯಾಗಿದ್ದರು

ಎಪ್ಪತ್ತರ ದಶಕ ಮತ್ತು ಅದಕ್ಕಿಂತ ಹೆಚ್ಚಿನ ಕಾಲದ ರಾಕ್ ಐಕಾನ್ ಪ್ಯಾಟಿ ಸ್ಮಿತ್ ರವರು ಹಲವಾರು ಸಂದರ್ಭಗಳಲ್ಲಿ ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿಯಾದ ಬಗ್ಗೆ ತಮ್ಮ ಆಳವಾದ ಮೆಚ್ಚುಗೆಯನ್ನು ವಿವರಿಸುತ್ತಾರೆ. ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ನಂತರ, ಅವರು ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ವಿವರಿಸುವ ಅವರ ಕವಿತೆ ಮತ್ತು ಇತರ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಫ್ಯಾಬಿಯೊ ಕೊಲಾಗ್ರಾಂಡೆ ಮತ್ತು ಯುಜೆನಿಯೊ ಮುರಾಲಿ

1946 ರಲ್ಲಿ ಜನಿಸಿದ ಮತ್ತು ಎಪ್ಪತ್ತರ ಹಾಗೂ ಅದಕ್ಕಿಂತ ಹೆಚ್ಚಿನ ಕಾಲದ ರಾಕ್ ಐಕಾನ್ ಆಗಿದ್ದ ಪ್ಯಾಟಿ ಸ್ಮಿತ್ ರವರು, ವಿಶ್ವಗುರು ಫ್ರಾನ್ಸಿಸ್ ರವರು ಬಗ್ಗೆ ಆಳವಾದ ಪ್ರೀತಿ ಮತ್ತು ಕೃತಜ್ಞತೆಯಿಂದ ಮಾತನಾಡುತ್ತಾರೆ. ಅವರ ಸಾವಿನ ಸುದ್ದಿ ತಿಳಿದ ನಂತರ, ಅಮೇರಿಕನ್ ಗಾಯಕ-ಗೀತರಚನೆಕಾರರು ಅವರ ಗೌರವಾರ್ಥವಾಗಿ ಒಂದು ಸಣ್ಣ ಕವಿತೆಯನ್ನು ರಚಿಸಿದರು, ವಿನಮ್ರ ಆದರೆ ಬಲಶಾಲಿಯಾದ ಅವರನ್ನು ಒಂದು ಕಾಡುಸಂಪಿಗೆ ಹೂವು ಎಂದು ಬಣ್ಣಿಸಿದರು.

ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಒಂದರಲ್ಲಿ ಹೀಗೆ ಬರೆದಿದ್ದಾರೆ:
"ನಿನ್ನೆ ರಾತ್ರಿ, ನಿದ್ರಿಸುವ ಮೊದಲು, ನಾನು ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ಕಳೆದ ಹನ್ನೆರಡು ವರ್ಷಗಳ ಬಗ್ಗೆ ಯೋಚಿಸಿದೆ. ನಾನು ಕಥೊಲಿಕಳಲ್ಲದಿದ್ದರೂ, ಅವರ ಸೌಮ್ಯ, ಮುಕ್ತ ಮತ್ತು ದೃಢವಾದ ಮಾನವೀಯತೆಯ ಭಾವನೆಯಿಂದ ನಾನು ಆಕರ್ಷಿತಳಾಗಿದ್ದೇನೆ., ಕ್ರಿಸ್ತರ ಬೋಧನೆಗಳನ್ನು ಅನುಸರಿಸಲು ಮತ್ತು ಬೋಧಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಅವರು ನಮ್ಮ ನಡುವೆ ಇದ್ದಾರೆಂದು ನನಗೆ ಸುರಕ್ಷಿತವೆನಿಸಿತು. ಸಾರ್ವಜನಿಕರಿಗೆ ಅವರ ಅಂತಿಮ ಮಾತುಗಳು ಶಾಂತಿಯ ಮೇಲೆ ಬಲವಾಗಿ ಕೇಂದ್ರೀಕೃತವಾಗಿರುವುದು ಸೂಕ್ತವಾಗಿದೆ. ಪೂಜ್ಯ ತಂದೆ ವಿಶ್ವಗುರು ಫ್ರಾನ್ಸಿಸ್ ರವರು ಪಾರಿವಾಳಗಳು ಭೇಟಿ ನೀಡುವ ಪ್ರೀತಿಯ ಸ್ಥಳಕ್ಕೆ ಏರಲಿ, ಅಂದರೆ ಸ್ವರ್ಗದ ಮಹಿಮಾನ್ವಿತ ಜ್ಯೋತಿಯಲ್ಲಿ ಆನಂದಿಸಲಿ.

ಸ್ಮಿತ್ ರವರು 2013ರಲ್ಲಿವಿಶ್ವಗುರು ಫ್ರಾನ್ಸಿಸ್ ರವರ ಕೈಕುಲುಕಲು ರೋಮ್‌ಗೆ ಪ್ರಯಾಣ ಬೆಳೆಸಿದ್ದರು ಮತ್ತು 2014 ರಲ್ಲಿ ವ್ಯಾಟಿಕನ್‌ನಲ್ಲಿ ಅವರಿಗಾಗಿ ಹಾಡಿದರು. ಈಗ, ಅವರ ನಿಧನದ ಸುದ್ದಿಯಿಂದ ಅವರು ನಿಜವಾದ ದುಃಖದಿಂದ ಮಾತನಾಡುತ್ತಾರೆ.

"ಎಲ್ಲರೂ ಎಚ್ಚರಗೊಳ್ಳಲಿ, ನಮ್ಮ ಸಾಮಾನ್ಯ ಮನೆಯನ್ನು ಸರಿಪಡಿಸಲು, ಗುಣಪಡಿಸಲು / ಧನ್ಯವಾದ ಹೇಳಲು, ಭರವಸೆಯ ಹಾಗೂ ವಿಶ್ವಾಸದ ಬೀಜಗಳನ್ನು ಬಿತ್ತಲು / ಅಗತ್ಯವಿರುವವರನ್ನು ತಲುಪಲು / ಆತ್ಮವು ಪ್ರೀತಿಗಾಗಿ ಹಾತೊರೆಯುವಾಗ / ಅದು ಮೇಲಿನಿಂದ ಬಂದಾಗ / ಕರುಣೆ, ಭರವಸೆ, ನಮ್ರತೆ / ಇವು ಪ್ರತಿದಿನ ಬದುಕಬೇಕಾದ ಪದಗಳು".
ಅವರ ಪದಗಳು ಹಾಗೆಯೇ ಮುಂದುವರಿಯುತ್ತದೆ, ವಿಮ್ ವೆಂಡರ್ಸ್ ರವರ ಸಾಕ್ಷ್ಯಚಿತ್ರ ವಿಶ್ವಗುರು ಫ್ರಾನ್ಸಿಸ್: ಎ ಮ್ಯಾನ್ ಆಫ್ ಹಿಸ್ ವರ್ಡ್ ಗಾಗಿ ಟೋನಿ ಶಾನಹನ್ ರವರೊಂದಿಗೆ ಸಹ-ಬರೆದ ಹಾಡಾದ ದೀಸ್ ಆರ್ ದಿ ವರ್ಡ್ಸ್.

ಜಪಾನ್‌ನಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿದ ಪ್ಯಾಟಿ ಸ್ಮಿತ್, ವ್ಯಾಟಿಕನ್ ಸುದ್ಧಿಯೊಂದಿಗೆ ವಿಶ್ವಗುರು ಫ್ರಾನ್ಸಿಸ್ ರವರು ನಮ್ಮೊಂದಿಗಿದ್ದ ಸಮಯಕ್ಕೆ ಕೃತಜ್ಞಳಾಗಿದ್ದೇನೆ ಎಂದು ಹೇಳಿದರು. ಅವರ ನಿಧನದಿಂದ ದುಃಖಿತರಾಗಿದ್ದರೂ, ಅವರ ಪರಂಪರೆ ಎಲ್ಲರ ಒಳಿತಿಗಾಗಿ ಉಳಿಯುತ್ತದೆ ಎಂದು ಅವರು ಆಶಿಸುತ್ತಿದ್ದಾರೆ.

ಪ್ರಶ್ನೆ: ಕಲ್ಲುಗಳ ನಡುವೆ ಅರಳಿದ ದಂಡೇಲಿಯನ್ (ಕಾಡುಸೇವಂತಿಗೆ) ಹೂವಾದ ವಿಶ್ವಗುರು ಫ್ರಾನ್ಸಿಸ್ ರವರ ಬಗ್ಗೆ ಕೆಲವು ಸಾಲುಗಳನ್ನು ಬರೆಯಲು ನಿಮ್ಮನ್ನು ಪ್ರೇರೇಪಿಸಿತು - ನೀವು ಅವರನ್ನು ಬಲಶಾಲಿ ಮತ್ತು ವಿನಮ್ರ ಎಂದು ಬಣ್ಣಿಸಿದ್ದೀರಿ, ಪ್ರಕೃತಿಯಿಂದ, ಕಾವ್ಯದಿಂದ ಮತ್ತು ಬಳಲುತ್ತಿರುವವರಿಂದ ಶೋಕಿಸಲ್ಪಟ್ಟಿದ್ದೀರಿ. ಅವರ ಸಂದೇಶ, ಅವರ ದೃಷ್ಟಿಕೋನ ಮತ್ತು ಅವರ ಆಲೋಚನೆಗಳೊಂದಿಗೆ ನೀವು ಎಷ್ಟು ಆಳವಾಗಿ ಸಂಪರ್ಕ ಹೊಂದಿದ್ದೀರಿ?
ಪ್ಯಾಟಿ ಸ್ಮಿತ್: ನನಗೆ ಅದು ನನ್ನ ಹೃದಯ ಬಡಿತದಷ್ಟೇ ಹತ್ತಿರದಲ್ಲಿತ್ತು. ನಾವು ಪ್ರಾರ್ಥಿಸುವಾಗ, ಹೃದಯದಿಂದ ಪ್ರಾರ್ಥಿಸಲು ನಮಗೆ ಸಲಹೆ ನೀಡಿದರು ಮತ್ತು ಪ್ರಾರ್ಥಿಸುವಾಗ - ಗಿಣಿಯಾಗಬೇಡಿ, ಕೇವಲ ಪದಗಳನ್ನು ಪಠಿಸಬೇಡಿ ಎಂದು ಅವರು ನಮಗೆ ಹೇಳಿದ್ದು ನನಗೆ ನೆನಪಿದೆ. ಅದು ಕೇಳುವುದಕ್ಕೂ ಮತ್ತು ಅವರ ಮಾತುಗಳನ್ನು ಕೇಳುವುದಕ್ಕೂ ಅನ್ವಯಿಸುತ್ತದೆ. ನಾನು ಯಾವಾಗಲೂ ನನ್ನ ಹೃದಯದಿಂದ ಕೇಳಿದ್ದೇನೆ ಏಕೆಂದರೆ ಅವರು ಹೃದಯದಿಂದ ಮಾತನಾಡುತ್ತಾರೆ, ಆದ್ದರಿಂದ ನೀವು ಅವರನ್ನು ನಿಮ್ಮ ಹೃದಯದಿಂದ ಅನುಭವಿಸಬೇಕು. ಹೌದು, ಎಲ್ಲವೂ ಅವನ ಹೃದಯಪೂರ್ವಕವಾದುವುಗಳು.

ಪ್ರಶ್ನೆ: ನೀವು ಗಮನಿಸಿದಂತೆ, ವಿಶ್ವಗುರು ಫ್ರಾನ್ಸಿಸ್ ರವರ ಅಂತಿಮ ಸಾರ್ವಜನಿಕ ಮಾತುಗಳು ಶಾಂತಿಗಾಗಿ ಕರೆಯಾಗಿದ್ದವು. ಮಾನವ ಭ್ರಾತೃತ್ವಕ್ಕೆ ಈ ಬದ್ಧತೆಯನ್ನು ಹೇಗೆ ಮುಂದುವರಿಸಬಹುದು?
ಪ್ಯಾಟಿ ಸ್ಮಿತ್: ನಾವು ತುಂಬಾ ತೊಂದರೆಗೀಡಾದ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಬಹಳಷ್ಟು ದುರಾಸೆ, ಅಧಿಕಾರಕ್ಕಾಗಿ ಹೆಚ್ಚಿನ ಆಸೆಯಿದೆ ಮತ್ತು ಪ್ರತಿದಿನ, ಸಾಧ್ಯವಿರುವ ಎಲ್ಲ ರೀತಿಯಲ್ಲಿ, ಒಬ್ಬರಿಗೊಬ್ಬರು ದಯೆಯಿಂದ ವರ್ತಿಸುವುದು ನಿಜವಾಗಿಯೂ ಜನರಿಗೆ ಬಿಟ್ಟದ್ದು. ಅವರು ನಮಗೆ ಕಲಿಸಿದ ಎಲ್ಲಾ ವಿಷಯಗಳು: ಒಳ್ಳೆಯವರಾಗಿರಲು, ಹಂಚಿಕೊಳ್ಳಲು, ಕರುಣಾಮಯಿಗಳಾಗಿರಲು. ನಾವು ದುರಾಸೆ ಮತ್ತು ಅಧಿಕಾರದ ಬಾಹ್ಯ ಶಕ್ತಿಗಳನ್ನು ದಯೆ, ಪ್ರೀತಿಯಿಂದ ಹೋರಾಡಬೇಕು ಮತ್ತು ಅದನ್ನು ಬೆಳಗಿಸಬೇಕು - ಅವರು ಮಾಡುತ್ತಿರುವ ದುರಾಸೆ ಮತ್ತು ಅಧಿಕಾರದ ಬಾಹ್ಯ ಶಕ್ತಿಗಳ ಕೆಲಸವನ್ನು ಕಡಿಮೆ ಮಾಡಬೇಕು ಅಥವಾ ಆದಷ್ಟು ಸ್ಥಗಿತಗೊಳಿಸಬೇಕು. ಇದು ತುಂಬಾ ಕಠಿಣವಾದ ಹಾದಿಯಾಗಲಿದೆ, ಆದರೆ ನಾವು ನಮ್ಮ ನೆರೆಹೊರೆಯವರೊಂದಿಗೆ ಶಾಂತಿಯುತವಾಗಿರಲು ಸಾಧ್ಯವಾದರೆ ಮತ್ತು ನಂತರ ನಮ್ಮ ನೆರೆಹೊರೆಯವರು ಅವರ ನೆರೆಹೊರೆಯವರೊಂದಿಗೆ ಶಾಂತಿಯುತವಾಗಿರಲು ಸಾಧ್ಯವಾದರೆ, ಇದು ಒಂದು ಆರಂಭ. ನಾವು ಅತ್ಯಂತ ವಿನಮ್ರವಾದ ಕಾರ್ಯಗಳಿಂದ ಪ್ರಾರಂಭಿಸಬೇಕು. ಅದು ಅವರು ನಮಗೆ ಕಲಿಸಿದ ಒಂದು ವಿಷಯ - ಸಣ್ಣಪುಟ್ಟ ಕಾರ್ಯಗಳು ಬಹಳ ಅರ್ಥಪೂರ್ಣವಾಗಿವೆ.

ಪ್ರಶ್ನೆ: ನೀವು ವಿಶ್ವಗುರು ಫ್ರಾನ್ಸಿಸ್ ರವರನ್ನು ಅವರ ವಿಶ್ವಗುರು ಸೇವಾಧಿಕಾರದ ಹುದ್ದೆಯ ಆರಂಭದಲ್ಲಿ ಭೇಟಿಯಾಗಿದ್ದಿರಿ ಮತ್ತು ನಂತರ ವ್ಯಾಟಿಕನ್‌ನಲ್ಲಿ ಅವರಿಗಾಗಿ ಹಾಡಿದ್ದಿರಿ. ನಿಮ್ಮ ನಡುವೆ ತಕ್ಷಣದ ತಿಳುವಳಿಕೆ ಇತ್ತೇ? ಆ ಸಂಪರ್ಕದ ಕ್ಷಣಗಳನ್ನು ನೀವು ಹೇಗೆ ನೆನಪಿಸಿಕೊಳ್ಳುತ್ತೀರಿ?
ಪ್ಯಾಟಿ ಸ್ಮಿತ್: ಅವರು ತುಂಬಾ ಭರವಸೆ, ಸಂತೋಷ ಮತ್ತು ಪ್ರೀತಿಯನ್ನು ಹೊರಸೂಸುತ್ತಾರೆ. ನನಗೆ ಅವರೊಂದಿಗೆ ಸಮಯ ನೀಡಿದಾಗಲೆಲ್ಲಾ, ನಾನು ಯಾವಾಗಲೂ ಅದನ್ನು ಕಡಿಮೆ ಮಾಡುತ್ತೇನೆ. ನನಗೆ ಐದು ನಿಮಿಷ ನೀಡಿದ್ದರೆ, ನಾನು ಒಂದೇ ಒಂದು ನಿಮಿಷ ತೆಗೆದುಕೊಳ್ಳುತ್ತಿದ್ದೆ, ಏಕೆಂದರೆ ಅವರನ್ನು ಬೇಟಿ ಮಾಡಲು ಮತ್ತು ಅವರ ಬಳಿ ಹಲವಾರು ಜನರೊಂದಿಗೆ ಹಂಚಿಕೊಳ್ಳಲು ತುಂಬಾ ವಿಷಯಗಳಿವೆ. ನಾನು ಆರಂಭದಿಂದಲೇ ಗಮನಿಸಿದ ಒಂದು ವಿಷಯವೆಂದರೆ ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿ. ನಾನು ಸಾಲುಗಟ್ಟಿ ನಿಂತಿದ್ದ ಜನರನ್ನು ನೋಡಿದೆ, ಅವರಲ್ಲಿ ಬಹಳ ಶ್ರೀಮಂತರು, ಬಹುಶಃ ತುಂಬಾ ಒಳ್ಳೆಯವರು, ದೊಡ್ಡ ಚಿನ್ನದ ಉಡುಗೊರೆಗಳೊಂದಿಗೆ, ಎಲ್ಲರೂ ತಮ್ಮ ಕೈಗಳನ್ನು ಚಾಚಿ ಎಲ್ಲರೂ ಸಾಲುಗಟ್ಟಿ ನಿಂತಿದ್ದರು. ಅವರು ಯಾವುದರ ಕಡೆಗೆ ಆಕರ್ಷಿತರಾದರು? ಮಗುವಿನ ನಗು. ಅವರ ಬಗ್ಗೆ ನಾನು ಗಮನಿಸಿದ ವಿಷಯಗಳು ಇವು. ಅಂತಹ ಸರಳತೆ ಮತ್ತು ವಿಶಾಲ ದೃಷ್ಟಿಕೋನವನ್ನು ಹೊಂದಿರುವ ವ್ಯಕ್ತಿ ನಮ್ಮೊಂದಿಗೆ ಈ ಜಗತ್ತಿನಲ್ಲಿ ಇದ್ದಾರೆ ಎಂದು ತಿಳಿದು ನನಗೆ ತುಂಬಾ ಸಾಂತ್ವನವಾಯಿತು.
 

30 ಏಪ್ರಿಲ್ 2025, 11:53