ಸಿಸ್ಟರ್ ವೆರೋನಿಕಾ ಡೊನಾಟೆಲ್ಲೊ – “ನಾವು: ಭರವಸೆಯ ಯಾತ್ರಿಕರು"
ಫೆಡೆರಿಕೊ ಪಿಯಾನಾ
ಸಂತೋಷ, ಭರವಸೆ, ಕಣ್ಣೀರು, ನಗು: ರೋಮ್‌ನ “ಅಗಸ್ಟಿನಿಯನಮ್” ಕಾಂಗ್ರೆಸ್ ಕೇಂದ್ರದ ಸಮ್ಮೇಳನ ಸಭಾಂಗಣದಲ್ಲಿ ಪ್ರದರ್ಶಿಸಲಾದ ಕೆಲವು ಭಾವನೆಗಳಾಗಿದ್ದವು, ಅದು ಅಂಗವಿಕಲರು ಮತ್ತು ಅವರ ಆರೈಕೆದಾರರು ಹಾಗೂ ಹಲವಾರು ದತ್ತಿ ಸಂಸ್ಥೆಗಳ ಮುಖ್ಯಸ್ಥರಿಂದ ತುಂಬಿತ್ತು.
ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನ (CEI) ಆಯೋಜಿಸಿದ್ದ "ನಾವು: ಭರವಸೆಯ ಯಾತ್ರಿಕರು" ಎಂಬ ಶೀರ್ಷಿಕೆಯ ಸಮ್ಮೇಳನಕ್ಕೆ ಜೀವ ತುಂಬಲು ಅವರೆಲ್ಲರೂ ಒಟ್ಟುಗೂಡಿದ್ದರು, ಇದು ಅಂಗವಿಕಲ ವ್ಯಕ್ತಿಗಳ ಜೂಬಿಲಿಯನ್ನು ಅಧಿಕೃತವಾಗಿ ಉದ್ಘಾಟಿಸಿತು.
ಪ್ಯಾರಾಲಿಂಪಿಕ್ ಕ್ರೀಡಾಪಟುಗಳಾದ ಬಿಬೆ ವಿಯೊ ಮತ್ತು ಒನಿ ಟ್ಯಾಪಿಯಾರವರು, ತಮ್ಮ ಕಥೆಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು, ಪ್ರತಿ ಕಠಿಣ ಪರಿಸ್ಥಿತಿಯನ್ನು ಹೊಸ ಚೈತನ್ಯದಿಂದ ಮತ್ತು ಭಯವಿಲ್ಲದೆ ಎದುರಿಸಲು ಅವರನ್ನು ಪ್ರೇರೇಪಿಸಿದರು, ಕೊನೆಯಲ್ಲಿ, ಅಂಗವೈಕಲ್ಯವು ಇಡೀ ಸಮಾಜಕ್ಕೆ ಒಂದು ಆಸ್ತಿಯಾಗಿದೆ ಎಂದು ತಿಳಿದಿದ್ದರು.
ವಿಶ್ವಗುರು ಫ್ರಾನ್ಸಿಸ್ ರವರ ಪರಂಪರೆ
ಇದಕ್ಕೂ ಮೊದಲು, ಸಮ್ಮೇಳನದ ಕೆಲಸವನ್ನು ಉದ್ಘಾಟಿಸುತ್ತಾ, ಇಟಾಲಿಯದ ಧರ್ಮಾಧ್ಯಕ್ಷರುಗಳ ಅಂಗವೈಕಲ್ಯ ಸಂಪರ್ಕ ವಿಭಾಗದ ಮುಖ್ಯಸ್ಥೆ ಸಿಸ್ಟರ್ ವೆರೋನಿಕಾ ಡೊನಾಟೆಲ್ಲೊರವರು, ಈ ಜೂಬಿಲಿಯು ವಿಶ್ವಗುರು ಫ್ರಾನ್ಸಿಸ್ ರವರ ಅನುಭವದ ಪರಂಪರೆಯಿಂದ ಹೇಗೆ ಪ್ರೇರಿತವಾಗಿದೆ ಎಂಬುದನ್ನು ನೆನಪಿಸಿಕೊಂಡರು.
"ಎಲ್ಲಾ ಭಾಷೆ ಮತ್ತು ರಾಷ್ಟ್ರದ ಪುರುಷರು ಹಾಗೂ ಮಹಿಳೆಯರು ಪ್ರಭುವಿಗೆ ಕೃತಜ್ಞತೆ ಸಲ್ಲಿಸಲು ಒಟ್ಟಾಗಿ ಸೇರುವುದನ್ನು ನೋಡುವುದು ಸುಂದರವಾಗಿದೆ" ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, ಅಂಗವಿಕಲ ವ್ಯಕ್ತಿಯನ್ನು ಅವರ ದೌರ್ಬಲ್ಯದ ಮಿತಿಗಳನ್ನು ಮೀರಿ ನೋಡುವ ಸಂಸ್ಕೃತಿಯ ಮೇಲೆ ನಾವು ಬಹಳಷ್ಟು ಕೆಲಸ ಮಾಡಿದ್ದೇವೆ.
ಇನ್ನೂ ಒಂದು ಹೆಜ್ಜೆ ಮುಂದೆ
ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಕ್ಯಾಗ್ಲಿಯಾರಿಯ ಮಹಾಧರ್ಮಾಧ್ಯಕ್ಷರಾದ ಗೈಸೆಪ್ಪೆ ಬಟುರಿರವರು ವೀಡಿಯೊ ಸಂದೇಶದಲ್ಲಿ, ಜೂಬಿಲಿಯು ಸ್ವತಃ "ದೇವರೆಂಬ ಪ್ರೀತಿಯ ಕಡೆಗೆ ಒಂದು ಹೆಜ್ಜೆ ಮುಂದೆ ಇಡಲು ನಮ್ಮನ್ನು ಆಹ್ವಾನಿಸುತ್ತದೆ" ಎಂದು ವಿವರಿಸಿದರು.
ತಮ್ಮ ಸ್ವಾಗತ ಭಾಷಣದಲ್ಲಿ, ಪವಿತ್ರ ಪೀಠಾಧಿಕಾರದ ಸಂವಹನಕ್ಕಾಗಿ ಡಿಕ್ಯಾಸ್ಟರಿಯ ಕಾರ್ಯದರ್ಶಿಯಾದ ಮಾನ್ಸಿಗ್ನರ್ ಲೂಸಿಯೊ ರೂಯಿಜ್ ರವರು, "ಇಡೀ ಡಿಕ್ಯಾಸ್ಟರಿಯು ಎಲ್ಲರನ್ನೂ ಒಳಗೊಂಡ ಸಮುದಾಯಗಳನ್ನು ನಿರ್ಮಿಸಲು ಬದ್ಧವಾಗಿದೆ, ಏಕೆಂದರೆ ಧರ್ಮಸಭೆಯ ನಿಜವಾದ ಸಂಪತ್ತು ವಿಶ್ವಾಸ, ಭರವಸೆ ಮತ್ತು ದಾನದ ಬಂಧಗಳಲ್ಲಿದೆ" ಎಂದು ಒತ್ತಿ ಹೇಳಿದರು.
ಸಮ್ಮೇಳನದಲ್ಲಿ ಭಾಗವಹಿಸಿದವರೆಲ್ಲರ, ಎರಡು ದುಂಡುಮೇಜಿನ ಸಭೆಗಳೊಂದಿಗೆ ಪ್ರಾರಂಭವಾಯಿತು, ಒಂದನ್ನು ಡಿಕಾಸ್ಟರಿ ಫಾರ್ ಕಮ್ಯುನಿಕೇಷನ್‌ನ ಉಪ ಸಂಪಾದಕೀಯ ನಿರ್ದೇಶಕ ಅಲೆಸ್ಸಾಂಡ್ರೊ ಗಿಸೊಟ್ಟಿರವರು ಮಾಡರೇಟ್ ಮಾಡಿದರು, ಮತ್ತು ಇನ್ನೊಂದು ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿಶಾಸ್ತ್ರದ ಸವಾಲುಗಳ ಮೇಲೆ ಕೇಂದ್ರೀಕರಿಸಿದರು, ಪತ್ರಕರ್ತೆ ಪಾವೊಲಾ ಸೆವೆರಿನಿ ಮೆಲೋಗ್ರಾನಿರವರು ಮಾಡರೇಟ್ ಮಾಡಿದರು. ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರಕ್ಕೆ ನೀಡಿದ ಒಂದು ಹೃದಯಸ್ಪರ್ಶಿ ತೀರ್ಥಯಾತ್ರೆಯೊಂದಿಗೆ ಮುಕ್ತಾಯವಾಯಿತು.