ಹುಡುಕಿ

ನಿಮ್ಮ ಬದ್ಧತೆ ಇಲ್ಲದೆ ಧರ್ಮಸಭೆ ಮುಂದುವರೆಯಲು ಸಾಧ್ಯವಿಲ್ಲ: ಧರ್ಮಕೇಂದ್ರದ ಗುರುಗಳಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತು

ಸಿನೋಡ್ ಕುರಿತ ಧರ್ಮಕೇಂದ್ರದ ಗುರುಗಳ ಅಂತರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸುತ್ತಿರುವ ಗುರುಗಳಿಗೆ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್, ಧರ್ಮಕೇಂದ್ರದ ಗುರುಗಳ ಪ್ರೀತಿ, ವಿಶ್ವಾಸ ಹಾಗೂ ಬದ್ಧತೆಯ ಹೊರತಾಗಿ ಧರ್ಮಸಭೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವರದಿ: ಡೆಬೋರ ಕ್ಯಾಸ್ಟೆಲಾನೋ ಲೊಬೋವ್, ಅಜಯ್ ಕುಮಾರ್

ಸಿನೋಡ್ ಕುರಿತ ಧರ್ಮಕೇಂದ್ರದ ಗುರುಗಳ ಅಂತರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸುತ್ತಿರುವ ಗುರುಗಳಿಗೆ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್, ಧರ್ಮಕೇಂದ್ರದ ಗುರುಗಳ ಪ್ರೀತಿ, ವಿಶ್ವಾಸ ಹಾಗೂ ಬದ್ಧತೆಯ ಹೊರತಾಗಿ ಧರ್ಮಸಭೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ರೋಮ್ ನಗರದ ಆಸುಪಾಸಿನಲ್ಲಿ ನಡೆಯುತ್ತಿರುವ ಸಿನೋಡ್ ಕುರಿತ ಧರ್ಮಕೇಂದ್ರದ ಗುರುಗಳ ಸಭೆಯು ಇಂದು ಗುರುವಾರ ಅಂತ್ಯಗೊಂಡಿದೆ. ಈ ನಾಲ್ಕು ದಿನಗಳ ಅವಧಿಯಲ್ಲಿ ಇದರಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಉಪನ್ಯಾಸವನ್ನು ನೀಡಲಾಗಿದೆ. ಆಲಿಸುವ ಧರ್ಮಸಭೆಯಾಗಿ ಹೇಗೆ ಮುನ್ನಡೆಯಬೇಕು?, ಧರ್ಮಸಭೆಯಲ್ಲಿ ವಿಶೇಷವಾಗಿ ಆಲಿಸುವ ಧರ್ಮಸಭೆಯಲ್ಲಿ ಧರ್ಮಕೇಂದ್ರದ ಗುರುಗಳ ಪಾತ್ರ ಹಾಗೂ ಮುಂತಾದ ವಿಷಯಗಳ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು.

ಕೊನೆಯ ದಿನದ ಕಾರ್ಯಕ್ರಮದಲ್ಲಿ ಇವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುತ್ತಾರೆ ಎಂಬುದು ನಿಗಧಿಯಾಗಿತ್ತು. ಆದರೆ ಕಾರಣಾಂತರಗಳಿಂದ ಪೋಪ್ ಫ‌್ರಾನ್ಸಿಸ್ ಅವರು ಇದರಲ್ಲಿ ಭಾಗವಹಿಸಿದ ಧರ್ಮಕೇಂದ್ರದ ಗುರುಗಳಿಗೆ ಪತ್ರವನ್ನು ಬರೆದು, ಧರ್ಮಕೇಂದ್ರದ ಗುರುಗಳ ಪ್ರೀತಿ, ವಿಶ್ವಾಸ ಹಾಗೂ ಬದ್ಧತೆಯ ಹೊರತಾಗಿ ಧರ್ಮಸಭೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಉತ್ಪ್ರೇಕ್ಷೆ ಎನಿಸಿದರೂ ಇದು ಸತ್ಯ ಎಂದು ಸಹ ಮರು ನುಡಿದಿದ್ದಾರೆ.

ಧರ್ಮಕೇಂದ್ರದ ಗುರುಗಳು ದೈನಂದಿನ ಸವಾಲುಗಳ ಹೊರತಾಗಿಯೂ ಸಹ ಧರ್ಮಕೇಂದ್ರಗಳನ್ನು ಮುನ್ನಡೆಸುವ ಮೂಲಕ, ಸ್ಥಳೀಯ ಧರ್ಮಸಭೆಯನ್ನು ಜೀವಂತವಾಗಿರಿಸಿದ್ದಾರೆ ಹಾಗೂ ಭಕ್ತಾಧಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದು ಪೋಪ್ ಹೇಳುತ್ತಾರೆ.

ತಮ್ಮೆಲ್ಲಾ ಕಾರ್ಯಗಳಲ್ಲಿ ಪ್ರಭುವನ್ನು ಮಾದರಿಯಾಗಿರಿಸಿಕೊಂಡು ಮುನ್ನಡೆಯಬೇಕೆಂದು ಧರ್ಮಕೇಂದ್ರದ ಗುರುಗಳಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತನ್ನು ಹೇಳಿದ್ದಾರೆ. 

02 May 2024, 19:03