ಸೇಂಟ್ ಮೇರಿ ಮೇಜರ್ ಮಹಾದೇವಾಲಯದಲ್ಲಿ ಕಾರ್ಡಿನಲ್ ಪಿಜ್ಜಬಲ್ಲಾರವರು ನಾಯಕತ್ವದಲ್ಲಿ ಜಪಸರ ಪ್ರಾರ್ಥನೆ
ಫ್ರಾನ್ಸೆಸ್ಕಾ ಮೆರ್ಲೊ
ಏಪ್ರಿಲ್ 25, ಶುಕ್ರವಾರದಂದು ವಿಶ್ವಗುರು ಫ್ರಾನ್ಸಿಸ್ ರವರ ಸ್ಮರಣಾರ್ಥದ ಐದನೇ ದಿನದ ಸಂಜೆಯ ಜಪಸರ ಪ್ರಾರ್ಥನೆಯ ಪಠಣವನ್ನು ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಬಲ್ಲಾರವರ ನೇತೃತ್ವ ವಹಿಸಿದ್ದರು.
ಜಪಸರ ಪ್ರಾರ್ಥನೆಯ ಮುನ್ನಡೆಸುವ ಮೊದಲು ತಮ್ಮ ಪರಿಚಯಾತ್ಮಕ ಮಾತುಗಳಲ್ಲಿ, ಕಾರ್ಡಿನಲ್ ಪಿಜ್ಜಬಲ್ಲಾರವರು ಭಕ್ತವಿಶ್ವಾಸಿಗಳನ್ನು ಕುರಿತು, ದೇವರನ್ನು ಅನುಸರಿಸುವುದು ಎಂದರೆ ಆತನಲ್ಲಿ ಮತ್ತು ಆತನ ವಾಕ್ಯದಲ್ಲಿ ವಿಶ್ವಾಸವಿಡುವುದು ಎಂದು ನೆನಪಿಸಿದರು. ಈ ದಿನದ ಶುಭಸಂದೇಶವನ್ನು ಧ್ಯಾನಿಸುತ್ತಾ, ಕಾರ್ಡಿನಲ್ ಪಿಜ್ಜಬಲ್ಲಾರವರು ಪುನರುತ್ಥಾನದ ನಂತರದ ದಿನಗಳಲ್ಲಿ, ಶಿಷ್ಯರು ತಮ್ಮೊಳಗೆ ಗೊಂದಲಗೊಂಡು, ತಾವು ಅನುಭವಿಸಿದ ನೋವಿನ ಘಟನೆಗಳ ಬಗ್ಗೆ ಯೋಚಿಸುವುದನ್ನು ತಪ್ಪಿಸುವ ಪ್ರಯತ್ನದಲ್ಲಿ, ಯಥಾ ಪ್ರಕಾರ, ತಮ್ಮ ದೈನಂದಿನ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಾರೆ ಎಂದು ಗಮನಿಸಿದರು.
"ನಾವು ಕೂಡ ಇಂತಹ ನಿಗೂಢತೆಯನ್ನು ಎದುರಿಸಿದಾಗ, ಪ್ರಲೋಭನೆಗೆ ಒಳಗಾಗುತ್ತೇವೆ ಮತ್ತು ದೇವರಲ್ಲಿ ವಿಶ್ವಾಸವಿಡಲು ನಾವು ಹೆಣಗಾಡುತ್ತೇವೆ" ಎಂದು ಕಾರ್ಡಿನಲ್ ಹೇಳಿದರು, ನಮ್ಮ ಪ್ರೀತಿಯ ಪೂಜ್ಯ ತಂದೆಯಾದ ವಿಶ್ವಗುರು ಫ್ರಾನ್ಸಿಸ್ ರವರ ಮರಣದೊಂದಿಗೆ, ನಾವು ಸಹ ಇದನ್ನು ನಂಬಲು ಹಿಂಜರಿಯುವ ಕಷ್ಟವನ್ನು ಅನುಭವಿಸುತ್ತೇವೆ ಎಂದು ಹೇಳಿದರು.
ಅವರು ಹೀಗೆ ಹೇಳಿದರು, " ಈ ದುಃಖದ ಗಂಟೆಯಲ್ಲಿ, ನಮ್ಮ ಹೃದಯಗಳನ್ನು ಮೇಲಕ್ಕೆತ್ತಿ, ಭರವಸೆಯ ಉದಯವಾಗಿ ಪರಿವರ್ತಿಸಲು ನಮಗೆ ಸಹಾಯ ಮಾಡುವಂತೆ ನಾವು ಪೂಜ್ಯ ಕನ್ಯಾ ಮಾತೆ ಮೇರಿ, ಸಲೂಸ್ ಪಾಪುಲಿ ರೊಮಾನಿರವರಲ್ಲಿ ಪ್ರಾರ್ಥಿಸಲು ಬಯಸುತ್ತೇವೆ".
'ನೊಂದವರ ಸಾಂತ್ವನಕಾರರಾದ' ಪೂಜ್ಯ ಕನ್ಯಾ ಮಾತೆ ಮೇರಿಯ ಮಧ್ಯಸ್ಥಿಕೆಗಾಗಿ ವಿನಂತಿಯೊಂದಿಗೆ ಅವರು ಮುಕ್ತಾಯಗೊಳಿಸಿದರು.