ಹುಡುಕಿ

ಪೋಪ್ ಫ್ರಾನ್ಸಿಸ್ ಅವರ ಸಮಾಧಿಗೆ ಭೇಟಿ ನೀಡಿ, ಪ್ರಾರ್ಥಿಸಿದ ಕಾರ್ಡಿನಲ್'ಗಳು

ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರಾದ ಕಾರ್ಡಿನಲ್ಲುಗಳು ರೋಮ್ ನಗರದಲ್ಲಿರುವ ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿನ ಪೋಪ್ ಫ್ರಾನ್ಸಿಸ್ ಅವರ ಸಮಾಧಿಗೆ ಭೇಟಿ ನೀಡಿ, ಸಂಜೆಯ ಪ್ರಾರ್ಥನೆಯನ್ನು ನೆರವೇರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರಾದ ಕಾರ್ಡಿನಲ್ಲುಗಳು ರೋಮ್ ನಗರದಲ್ಲಿರುವ ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿನ ಪೋಪ್ ಫ್ರಾನ್ಸಿಸ್ ಅವರ ಸಮಾಧಿಗೆ ಭೇಟಿ ನೀಡಿ, ಸಂಜೆಯ ಪ್ರಾರ್ಥನೆಯನ್ನು ನೆರವೇರಿಸಿದ್ದಾರೆ. 

ಪಾಸ್ಖ ಕಾಲದ ಎರಡನೇ ಭಾನುವಾರದಂದು ಅಂದರೆ ದೈವಿಕ ಕರುಣೆಯ ಭಾನುವಾರದಂದು ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರಾದ ವಿವಿಧ ಕಾರ್ಡಿನಲ್ಲುಗಳು ಸಂತ ಮೇರಿ ಮೇಜರ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಪೋಪ್ ಫ್ರಾನ್ಸಿಸ್ ಅವರ ಸಮಾಧಿಯ ಮುಂದೆ ನೆರೆದು, ಎರಡನೇ ಸಂಜೆಯ ಪ್ರಾರ್ಥನೆಯನ್ನು  ನೆರವೇರಿಸಿದ್ದಾರೆ. ಇದೇ ವೇಳೆ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಗೌರವವನ್ನು ಸೂಚಿಸಿದ್ದಾರೆ.

ಕಾರ್ಡಿನಲ್ ರೊಲಾಂಡ್ ಮ್ಯಾಕ್ರಿಕಾಸ್ ಅವರು ಸಂಜೆಯ ಪ್ರಾರ್ಥನೆಯನ್ನು ಮುನ್ನಡೆಸಿದ್ದಾರೆ.

ಕಾರ್ಡಿನಲ್ಲುಗಳ ಜೊತೆಗೆ ಅಲ್ಲಿ ನೆರೆದಿದ್ದ ಭಕ್ತಾಧಿಗಳ ಗುಂಪು ಸಹ ಈ ಪ್ರಾರ್ಥನೆಯಲ್ಲಿ ಭಾಗವಹಿಸಿತು ಎಂಬುದು ವಿಶೇಷವಾಗಿದೆ.

ಸಂತ ಮೇರಿ ಮೇಜರ್ ಮಹಾದೇವಾಲಯ: ಸಂಜೆಯ ಎರಡನೇ ಪ್ರಾರ್ಥನೆ
28 ಏಪ್ರಿಲ್ 2025, 15:08