ಹುಡುಕಿ

Cardinali arrivati a Santa Maria Maggiore per l'omaggio al Papa Cardinali arrivati a Santa Maria Maggiore per l'omaggio al Papa  (ANSA)

ಕಾರ್ಡಿನಲ್ ಮಕ್ರಿಕಾಸ್: ಜಗದ್ಗುರುಗಳು ಈಗ 'ತಮ್ಮ ತಾಯಿಯ ಪ್ರೀತಿಯ ನೋಟದಡಿಯಲ್ಲಿ' ವಿಶ್ರಾಂತಿ ಪಡೆಯುತ್ತಿದ್ದಾರೆ

ಸಂತ ಮೇರಿ ಮೇಜರ್ ಬೆಸಿಲಿಕಾದಲ್ಲಿ ಪೋಪ್ ಫ್ರಾನ್ಸಿಸ್ ರವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಿದ ನಂತರ, ಬೆಸಿಲಿಕಾದ ಕೋಡ್ಜುಟರ್ ಆರ್ಚ್‌ಪ್ರಿಸ್ಟ್ ಕಾರ್ಡಿನಲ್ ರೋಲ್ಯಾಂಡ್ಸ್ ಮಕ್ರಿಕಾಸ್ ಅವರು ಜಪಸರವನ್ನು ಮುನ್ನಡೆಸಿದರು.

ವ್ಯಾಟಿಕನ್ ನ್ಯೂಸ್

ಶನಿವಾರ ಸಂಜೆ, ರೋಮ್ ಸಮಯ ರಾತ್ರಿ 9 ಗಂಟೆಗೆ, ಕಾರ್ಡಿನಲ್ ರೋಲ್ಯಾಂಡ್ಸ್ ಮಕ್ರಿಕಾಸ್ ಅವರು ಪೋಪ್ ಫ್ರಾನ್ಸಿಸ್ ಅವರ ಆತ್ಮಶಾಂತಿಗಾಗಿ ಜಪಸರದ ಪ್ರಾರ್ಥನೆಯ ಅಧ್ಯಕ್ಷತೆ ವಹಿಸಿದ್ದರು.

ಜಗದ್ಗುರುಗಳನ್ನು ಈಗ ಸಮಾಧಿ ಮಾಡಿರುವ ಸಂತ ಮೇರಿ ಮೇಜರ್ ಬೆಸಿಲಿಕಾದ ಕೋಡ್ಜುಟರ್ ಆರ್ಚ್‌ಪ್ರಿಸ್ಟ್ ಆಗಿರುವ ಕಾರ್ಡಿನಲ್, ಈ ಕೆಳಗಿನ ಮಾತುಗಳೊಂದಿಗೆ ಪ್ರಾರ್ಥನೆಯನ್ನು ಪರಿಚಯಿಸಿದರು:

"ಇಂದು, ಮಹಾದೇವಾಲಯಕ್ಕೆ ಆಗಮಿಸುವುದರೊಂದಿಗೆ, ನಮ್ಮ ಪ್ರೀತಿಯ ಪೋಪ್ ಫ್ರಾನ್ಸಿಸ್ ತಮ್ಮ ಅಂತಿಮ ಪ್ರಯಾಣವನ್ನು ಪೂರ್ಣಗೊಳಿಸಿದರು. ಅವರು ರೋಮ್‌ನ ಬೀದಿಗಳಲ್ಲಿ ಹಾದುಹೋದರು ಮತ್ತು ಹಲವಾರು ವಿಶ್ವಾಸಿಗಳು ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು ಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.  ನಮ್ಮ ಧರ್ಮಸಭೆಗೆ ಅವರು ನೀಡಿದ ಎಲ್ಲಾ ಫಲಪ್ರದ ಸೇವೆಗಳನ್ನು ಸ್ಮರಿಸಿ ನಮ್ಮ ಹೃದಯಗಳಲ್ಲಿ ಜೀವಂತವಾಗಿರಿಸಿಕೊಳ್ಳುತ್ತೇವೆ. ಅವರು ತಮ್ಮ ಕೊನೆಯ ಉಸಿರಿನವರೆಗೂ ಪ್ರೀತಿಸಿದ ಧರ್ಮಸಭೆಗೆ ತಮ್ಮ ಸೇವೆಯನ್ನು ಸಲ್ಲಿಸಿದರು. ಇಂದಿನಿಂದ, ಅವರಿಗೆ ತುಂಬಾ ಪ್ರಿಯರಾಗಿದ್ದ, ಅವರ ತಾಯಿಯ ಪ್ರೀತಿಯ ನೋಟದಡಿಯಲ್ಲಿ, ಈ ಸಂತ ಮೇರಿ ಮಹಾದೇವಾಲಯದಲ್ಲಿ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಇಲ್ಲಿ ಸಲೂಸ್ ಪಾಪುಲಿ ರೊಮಾನಿ (ರೋಮ್ ಜನರ ಸ್ವರ್ಗ) ಎಂಬ ಬಿರುದಿನಲ್ಲಿ ಪೂಜಿಸಲಾಗುತ್ತದೆ. ಪುನರುತ್ಥಾನರಾದ ತಮ್ಮ ಪ್ರೀತಿಯ ಪುತ್ರನ ಜ್ಯೋತಿ ಇವರ ಮೇಲೆ ಪ್ರಕಾಶಿಸಲಿ ಮತ್ತು ಅವರ ಸೇವಕರಿಗೆ ವಾಗ್ದಾನ ಮಾಡಿದ ಪ್ರತಿಫಲವನ್ನು ನೀಡಲಿ ಎಂಬುದಾಗಿ ನಾವೆಲ್ಲರು ಪ್ರಾರ್ಥಿಸೋಣ . ಕ್ರೈಸ್ತರ ಸಹಾಯ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ."

28 ಏಪ್ರಿಲ್ 2025, 11:44