ಪೋಪ್ ಫ್ರಾನ್ಸಿಸ್ ಅವರೊಂದಿಗೆ ಎಲ್ಲರೂ ಸಹೋದರ ಭ್ರಾತೃತ್ವಧ ಅಪ್ಪುಗೆಯಲ್ಲಿ
ಇಂದು ಸಂತ ಪೇತ್ರರ ಚೌಕದಲ್ಲಿ ನಿಜವಾಗಿಯೂ ಬೇರೆ ಯಾರೂ ಹೊಂದಿಕೊಳ್ಳಲು ಸಾಧ್ಯವಾಗದಷ್ಟು ಜನರಿಂದ ಕಿಕ್ಕಿರಿದಿತ್ತು. ಆ ಚೌಕಕ್ಕೆ ಹೋಗುವ ಎಲ್ಲಾ ರಸ್ತೆಗಳಲ್ಲಿಯೂ, ಅದರ ಸುತ್ತಲಿನ ಬೀದಿಗಳಲ್ಲಿ ಮತ್ತು ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಹೋಗುವ ದಾರಿಯುದ್ದಕ್ಕೂ ಎಲ್ಲಾ ಜನರು ಅಲ್ಲಿದ್ದರು.
ವೃದ್ಧರಿಂದ ಸಣ್ಣ ಮಕ್ಕಳವರೆಗೂ ಕೂಡಿದ ಜನಸಮೂಹವು ಪೋಪ್ ಫ್ರಾನ್ಸಿಸ್ ರವರ ನಮ್ರತೆಯನ್ನು ಸಾರಲು ಸಾಕ್ಷಿಯಾಯಿತು. ಅದರಲ್ಲಿ ಕೂಡ ಕೆಲವೇ ತಿಂಗಳ ವಯಸ್ಸಿನ ಶಿಶುಗಳು ಸಹ ಇದ್ದರು, ಅವರ ಪೋಷಕರು ತಮ್ಮ ಜೀವನದ ಆರಂಭಿಕ ದಿನಗಳಲ್ಲಿ ಒಂದು ವಿಶೇಷ ಕ್ಷಣದ ಸಾಕ್ಷಿಯಾಗಲು ಕರೆತಂದರು.
ಇ0ತಹ ಬಹೂ ದೊಡ್ಡ ಜನಸಾಗರ ಶಾಂತಿಯಿAದ ಬದುಕಲು ಸಾಧ್ಯ ಎಂದು ತೋರಿಸಿತು ಮಾತ್ರವಲ್ಲ ಜುಬಿಲಿ 2025 ಭರವಸೆಯ ಕಣ್ಮಣಿಯಾಯಿತು. ಸಾವಿರಾರು ಯಾಜಕರು, ಧರ್ಮಾಧ್ಯಕ್ಷರುಗಳು, ಕಾರ್ಡಿನಲ್ಗಳು, ಹಾಗು ಜನ ಸಾಮಾನ್ಯರು ತಮ್ಮ ದುಃಖವನ್ನು ವ್ಯಕ್ತಪಡಿಸಿ ನಂಬಿಕೆಯಿ0ದ ಇಂತಹ ವ್ಯೆಭವದಲ್ಲಿ ಪಾಲ್ಗೊಂಡರು.
ಪ್ರಮುಖ ರಾಷ್ಟ್ರದ ಅಧ್ಯಕ್ಷರುಗಳು, ಶಕ್ತಿಶಾಲಿ ವ್ಯಕ್ತಿಗಳು, ಶ್ರೀಮಂತರು, ಬಡವರು, ಜಗದ್ಗುರು, ಇತರ ಧರ್ಮಗಳ ನಂಬಿಕೆಯುಳ್ಳವರೂ ಮತ್ತು ಶತ್ರುಗಳು ಸಹ ಫ್ರಾನ್ಸಿಸ್ ರವರ ಮರಣಕ್ಕೆ ಸಾಕ್ಷಿಯಾದರು.
ದೇವರು ಪಕ್ಷಪಾತಿಯಲ್ಲ ಎಂದು ನನಗೆ ನಿಜವಾಗಿಯೂ ಅರ್ಥವಾಗಿದೆ, ಆದರೆ ಪ್ರತಿಯೊಂದು ರಾಷ್ಟ್ರದಲ್ಲಿಯೂ ಅವರಿಗೆ ಭಯಪಡುವ ಮತ್ತು ಸರಿಯಾದದ್ದನ್ನು ಮಾಡುವವರು ನಿಜವಾಗಿಯೂ ಸ್ವೀಕಾರಾರ್ಹರು, ಎನ್ನುವಂಥಹ ಪೇತ್ರರ ವಾಕ್ಯಗಳು ನಿಜವಾದವು.