ಹುಡುಕಿ

2013 ರಲ್ಲಿ ನಡೆದ ಪೋಪ್ ಆಯ್ಕೆಯ ಮಹಾಸಭೆ 2013 ರಲ್ಲಿ ನಡೆದ ಪೋಪ್ ಆಯ್ಕೆಯ ಮಹಾಸಭೆ 

ನೂತನ ಪೋಪ್ ಆಯ್ಕೆಯ ಮಹಾಸಭೆ ಮೇ 7 ಕ್ಕೆ ಆರಂಭ

267ನೇ ವಿಶ್ವಗುರುವನ್ನು ಆಯ್ಕೆಮಾಡುವ ಮಹಾಸಭೆಯು ಮೇ 7 ಕ್ಕೆ ಆರಂಭವಾಗಲಿದೆ ಎಂದು ಇಂದು ನಡೆದ ಕಾರ್ಡಿನಲ್ಲುಗಳ ಪರಿಷತ್ತಿನ ಐದನೇ ಸಭೆಯಲ್ಲಿ ನಿರ್ಧರಿಸಲಾಗಿದೆ. ಪೋಪ್ ಫ್ರಾನ್ಸಿಸ್ ಅವರ ಆತ್ಮಶಾಂತಿಗಾಗಿ ಹಮ್ಮಿಕೊಂಡಿರುವ ನವದಿನಗಳ ಶೋಕಾಚರಣೆ ಹಾಗೂ ಪ್ರಾರ್ಥನೆಗಳು ಮುಕ್ತಾಯವಾದ ನಂತರ ಈ ಪ್ರಕ್ರಿಯೆಯು ಆರಂಭವಾಗಲಿದೆ.

ವರದಿ: ವ್ಯಾಟಿಕನ್ ನ್ಯೂಸ್

267ನೇ ವಿಶ್ವಗುರುವನ್ನು ಆಯ್ಕೆಮಾಡುವ ಮಹಾಸಭೆಯು ಮೇ 7 ಕ್ಕೆ ಆರಂಭವಾಗಲಿದೆ ಎಂದು ಇಂದು ನಡೆದ ಕಾರ್ಡಿನಲ್ಲುಗಳ ಪರಿಷತ್ತಿನ ಐದನೇ ಸಭೆಯಲ್ಲಿ ನಿರ್ಧರಿಸಲಾಗಿದೆ. ಪೋಪ್ ಫ್ರಾನ್ಸಿಸ್ ಅವರ ಆತ್ಮಶಾಂತಿಗಾಗಿ ಹಮ್ಮಿಕೊಂಡಿರುವ ನವದಿನಗಳ ಶೋಕಾಚರಣೆ ಹಾಗೂ ಪ್ರಾರ್ಥನೆಗಳು ಮುಕ್ತಾಯವಾದ ನಂತರ ಈ ಪ್ರಕ್ರಿಯೆಯು ಆರಂಭವಾಗಲಿದೆ.

ಸೋಮವಾರ ಬೆಳಿಗ್ಗೆ ಸುಮಾರು 180 ಕಾರ್ಡಿನಲ್ಲುಗಳು (ಅದರಲ್ಲಿ ನೂರಕ್ಕೂ ಹೆಚ್ಚು ಜನರು ಪೋಪ್ ಅವರ ಆಯ್ಕೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವವರು) ಸಭೆ ಸೇರಿ ಮುಂದಿನ ವಿಶ್ವಗುರುಗಳನ್ನು ಆಯ್ಕೆಮಾಡುವ ಪ್ರಕ್ರಿಯೆಯನ್ನು ಅಂದರೆ ಮಹಾಸಭೆಯನ್ನು ಮೇ 7, 2025 ರಂದು ಆರಂಭಿಸುವುದಾಗಿ ನಿರ್ಧರಿಸಿದ್ದಾರೆ.

ವ್ಯಾಟಿಕನ್ನಿನ ಸಿಸ್ಟೈನ್ ಚಾಪೆಲ್'ನಲ್ಲಿ ಈ ಪ್ರಕ್ರಿಯೆಯು ನಡೆಯಲಿದ್ದು, ಆ ದಿನಗಳಲ್ಲಿ ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ಮಹಾಸಭೆ (ಕಾನ್ಕ್ಲೇವ್) ಆರಂಭವಾಗುವುದಕ್ಕೂ ಮುಂಚಿತವಾಗಿ ಮತದಾರ ಕಾರ್ಡಿನಲ್ಲುಗಳು ಪೋಪ್ ವಿಶ್ವಗುರಗಳನ್ನು ಆಯ್ಕೆಮಾಡುವ ಬಲಿಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಇದರ ನಂತರ ಮಧ್ಯಾಹ್ನ ಅವರು ನೂತನ ಪೋಪ್ ಅವರನ್ನು ಆಯ್ಕೆ ಮಾಡುವುದಕ್ಕೆ ಸಿಸ್ಟೈನ್ ಚಾಪೆಲ್ ಒಳಗೆ ಹೋಗಲಿದ್ದಾರೆ.

ಎಲ್ಲರೂ ಈ ಚಾಪೆಲ್ (ಪ್ರಾರ್ಥನಾಲಯ) ಒಳಗೆ ಹೋದ ನಂತರ ಪ್ರೇಷಿತ ಸಂವಿಧಾನದ ನಿಯಮದಂತೆ ಗೌಪ್ಯತಾ ಪ್ರಮಾಣವನ್ನು ಸ್ವೀಕರಿಸುತ್ತಾರೆ.

ನೂತನ ಪೋಪ್ ಆಯ್ಕೆಯ ಪ್ರಕ್ರಿಯೆಯಲ್ಲಿ ಯಾವುದೇ ಬಾಹ್ಯ ಶಿಫಾರಸ್ಸುಗಳು, ಅಡಚಣೆಗಳಿಗೆ ಹಾಗೂ ಯಾವುದೇ ರೀತಿಯ ಅನ್ಯ ಮಾರ್ಗಗಳಿಗೆ ಗಮನವನ್ನು ನೀಡುವುದಿಲ್ಲ ಎಂದು ಕಾರ್ಡಿನಲ್ಲುಗಳು ಪ್ರಮಾಣವನ್ನು ಗೈದು, ಅತ್ಯಂತ ಗೌಪ್ಯತಾ ರೀತಿಯಲ್ಲಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳ ಚರ್ಚೆಗಳು ನಡೆಯುತ್ತವೆ. ಸಿಸ್ಟೀನ್ ಛಾಪೆಲ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಸಂತಾ ಮಾರ್ತಾವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಕಾರ್ಡಿನಲ್‌ಗಳು ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಮುಂದಿನ ಪೋಪ್‌ನ ಗುಣಲಕ್ಷಣಗಳು ಏನಿರಬೇಕು? ಚರ್ಚ್ ಮುಂದೆ ಇರುವ ಸವಾಲುಗಳೇನು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ. ಎಲ್ಲ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ, ಅವರ ಧಾರ್ಮಿಕ ಜ್ಞಾನ, ಪಾಂಡಿತ್ಯಗಳ ಆಧಾರದಲ್ಲಿ ಕಾರ್ಡಿನಲ್‌ಗಳು ಅವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತಾರೆ.

ಹಲವು ದಿನಗಳವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಯಾವುದೇ ವ್ಯಕ್ತಿಗೆ ಮೂರನೇ ಎರಡರಷ್ಟು ಮತಗಳು ದೊರಕುವವರೆಗೂ ಪ್ರತಿನಿತ್ಯವೂ ಎರಡು ಬಾರಿ ಮತದಾನ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಬಹಳ ರಹಸ್ಯವಾಗಿ ನಡೆಯುತ್ತವೆ. ಪ್ರತಿ ಬಾರಿ ಮತದಾನ ನಡೆದ ಬಳಿಕ ಫಲಿತಾಂಶವನ್ನು ಬಹಿರಂಗ ಮಾಡಲಾಗುತ್ತದೆ. ಬಹುಮತ ಪಡೆದರೆ, ಫಲಿತಾಂಶ ಬಂದ ಒಂದು ಗಂಟೆಯ ಒಳಗೆ ನೂತನ ಪೋಪ್, ತಮ್ಮ ನಿವಾಸದ ಬಾಲ್ಕನಿಯಿಂದ ಕೈಬೀಸುತ್ತಾರೆ.

ನೂತನ ಪೋಪ್ ಆಯ್ಕೆಯ ಬಗ್ಗೆ ಪ್ರತಿನಿತ್ಯವೂ ಜನರಿಗೆ ಮಾಹಿತಿ ನೀಡಲಾಗುತ್ತದೆ. ಇದಕ್ಕಾಗಿ ಕಪ್ಪು ಮತ್ತು ಬಳಿ ಹೊಗೆಗಳೆಂಬ ಸಂಕೇತಗಳನ್ನು ರೂಪಿಸಿಕೊಳ್ಳಲಾಗಿದೆ. ಸಿಸ್ಟೀನ್ ಛಾಪೆಲ್ ಕಟ್ಟಡದಲ್ಲಿರುವ ಚಿಮಿಣಿಯ ಮೂಲಕ ಈ ಸಂಕೇತವನ್ನು ರವಾನಿಸಲಾಗುತ್ತದೆ. ಪೋಪ್ ಆಯ್ಕೆ ಪ್ರಕ್ರಿಯೆ ಪೂರ್ಣವಾಗಲಿಲ್ಲ ಎಂದರೆ, ಕಪ್ಪು ಹೊಗೆಯನ್ನು ಹೊರಸೂಸಲಾಗುತ್ತದೆ. ನೂತನ ಪೋಪ್ ಆಯ್ಕೆ ಪೂರ್ಣಗೊಂಡರೆ, ಬಿಳಿ ಹೊಗೆ ಬಿಡಲಾಗುತ್ತದೆ.

ಮತದಾನ ಪ್ರಕ್ರಿಯೆಯು ರಹಸ್ಯವಾಗಿ ನಡೆಯುತ್ತದೆ. ಆದ್ದರಿಂದ ಪ್ರತಿಬಾರಿ ಮತದಾನ ನಡೆದು ಫಲಿತಾಂಶ ಬಹಿರಂಗಗೊಂಡ ಬಳಿಕ ಮತಪತ್ರಗಳನ್ನು ಸುಡಲಾಗುತ್ತದೆ. ಪ್ರತಿನಿತ್ಯವೂ ಹೊಗೆಯ ಸಂಕೇತವನ್ನು ನೀಡಬೇಕಾಗಿರುವುದರಿಂದ ಮತಪತ್ರಗಳನ್ನೂ ಸುಡಲಾಗುತ್ತದೆ. ಸಾಂಪ್ರದಾಯಿಕವಾಗಿ ಕಪ್ಪು ಹೂಗೆ ಮೂಡಿಸಲು, ಮತಪತ್ರಗಳ ಜೊತೆಯಲ್ಲಿ ಒಣ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಬಿಳಿ ಹೊಗೆಗಾಗಿ ಹಸಿ ಹಲ್ಲು ಬಳಸಲಾಗುತ್ತಿತ್ತು. ಆಧುನಿಕ ಯುಗದಲ್ಲಿ ರಾಸಾಯನಿಕಗಳನ್ನು ಬಳಸಿ ಹೊಗೆಯನ್ನು ಮೂಡಿಸಲಾಗುತ್ತದೆ.

28 ಏಪ್ರಿಲ್ 2025, 15:40