ವಿಶೇಷಚೇತನರ ಜ್ಯೂಬಿಲಿಗೆ ಬಲಿಪೂಜೆ ಅರ್ಪಿಸಿದ ಆರ್ಚ್'ಬಿಷಪ್ ಫಿಸಿಶೆಲ್ಲಾ
ವರದಿ: ವ್ಯಾಟಿಕನ್ ನ್ಯೂಸ್
ವಿಶೇಷಚೇತನರ ಜ್ಯೂಬಿಲಿಯ ಮೊದಲ ದಿನದಂದು ಆರ್ಚ್'ಬಿಷಪ್ ಫಿಸಿಶೆಲ್ಲಾ ಅವರು ರೋಮ್ ನಗರದ ಸೇಂಟ್ ಪೌಲ್ ಔಟ್'ಸೈಡ್ ದಿ ವಾಲ್ಸ್ ಮಹಾದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಪೋಪ್ ಫ್ರಾನ್ಸಿಸ್ ಅವರ ಜೀವನ ನಾವು ಎಂದಿಗೂ ಮೌನವಾಗಿರದಂತಹ ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಡಿಕಾಸ್ಟರಿ ಆಫ್ ಇವ್ಯಾಂಜಲೈಸೇಷನ್ (ಸುವಾರ್ತಾ ಪ್ರಸಾರ ಪೀಠ) ನ ಪ್ರೋ-ಫ್ರಿಫೆಕ್ಟ್ ಆಗಿರುವ ಆರ್ಚ್'ಬಿಷಪ್ ರೀನೊ ಫಿಸಿಶೆಲ್ಲಾ ಅವರು ವಿಶೇಷಚೇತನರ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ತಮ್ಮ ಪ್ರಬೋಧನೆಯಲ್ಲಿ ಅವರು ಧೈರ್ಯ, ಕ್ರಾಂತಿ, ಹಾಗೂ ಸಾಮಾನ್ಯ ಎಂಬುವ ಪದಗಳನ್ನು ಉಪಯೋಗಿಸಿದ್ದು, ಇವೆಲ್ಲವನ್ನೂ ಐಕ್ಯತೆಗಾಗಿ ಉಪಯೋಗಿಸಿ, ಒಳಗೊಳ್ಳಬೇಕು ಎಂದು ಹೇಳಿದ್ದಾರೆ.
ವಿಕಲಚೇತನರು ಹಾಗೂ ಅವರಿಗೆ ಕಾಳಜಿಯನ್ನು ವಹಿಸುತ್ತಿರುವ ವ್ಯಕ್ತಿಗಳ ಸ‌್ಥೈರ್ಯವನ್ನು ಹೊಗಳಿದ ಆರ್ಚ್'ಬಿಷಪ್ ಅವರು ನಿಜವಾಗಿಯೂ ನಾವು ಜನರನ್ನು ಒಳಗೊಂಡರೆ ಹಾಗೂ ಆಹ್ವಾನಿಸಿದರೆ ಯಾರೂ ಒಂಟಿಯಾಗಿರುವುದಿಲ್ಲ ಎಂದು ಹೇಳಿದರು. ಈ ಹಿಂದೆ ಪವಿತ್ರ ವರ್ಷಗಳನ್ನು ಸೇರಿದಂತೆ ವಿವಿಧ ಪ್ರಮುಖ ಆಚರಣೆಗಳ ವರ್ಷಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಇವರ ಹೆಗಲಿಗೆ ಹೊರಿಸಲಾಗಿತ್ತು.
ಈ ಜ್ಯೂಬಿಲಿಯು ಸಂತ ಪೌಲರ ಮಹಾದೇವಾಲಯದಲ್ಲಿ ಆಯೋಜಿತವಾಗಿದ್ದು, ಸಂತ ಪೌಲರು ದೀನರ ಪ್ರೇಷಿತರಾಗಿದ್ದರು ಹಾಗೂ ಎಲ್ಲವನ್ನೂ ಒಳಗೊಳ್ಳುವವರಾಗಿದ್ದರು ಎಂಬುದರ ಸಂಕೇತವಾಗಿದೆ. ಇದೇ ಸಂದರ್ಭದಲ್ಲಿ ಆರ್ಚ್'ಬಿಷಪ್ ಫಿಸಿಶೆಲ್ಲಾ ಅವರು ಪೋಪ್ ಫ್ರಾನ್ಸಿಸ್ ಅವರ ಪೋಪಾಧಿಕಾರದ ಪ್ರಮುಖ ಅಂಶಗಳಾಗಿದ್ದ ದಯೆ ಮತ್ತು ಒಳಗೊಳ್ಳುವಿಕೆಯ ಕುರಿತು ಮಾತನಾಡಿ, ಎಲ್ಲರನ್ನೂ ನಾವು ಧರ್ಮಸಭೆಯಂತೆ ಒಳಗೊಳ್ಳಬೇಕು ಎಂದು ಹೇಳಿದರು.
ಈ ಬಲಿಪೂಜೆಗೆ ಇಟಲಿ ಸೇರಿದಂತೆ ವಿವಿಧ ದೇಶಗಳಿಂದ ಸಾವಿರಾರು ವಿಶೇಷಚೇತನರು ಆಗಮಿಸಿದ್ದರು.