ಮುಂಬರುವ ನೂತನ ಪೋಪ್ ಆಯ್ಕೆ ಪ್ರಕ್ರಿಯಲ್ಲಿ ಭಾಗವಹಿಸದಿರಲು ಕಾರ್ಡಿನಲ್ ಬೆಚ್ಯು ನಿರ್ಧಾರ
ವರದಿ: ವ್ಯಾಟಿಕನ್ ನ್ಯೂಸ್
ಕಾರ್ಡಿನಲ್ ಜಿವಾನ್ನಿ ಎಂಜೆಲೋ ಬೆಚ್ಯು ಅವರು ಪೋಪ್ ಫ್ರಾನ್ಸಿಸ್ ಅವರ ಕೊನೆಯ ಉಯಿಲನ್ನು ಗೌರವಿಸಿ, ಮುಂಬರುವ ಕಾನ್ಕ್ಲೇವ್ (ಪೋಪ್ ಆಯ್ಕೆ ಪ್ರಕ್ರಿಯೆ) ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಎಪ್ರಿಲ್ 29, ಮಂಗಳವಾರ ಇಟಾಲಿಯನ್ ಕಾರ್ಡಿನಲ್ ಜಿವಾನ್ನಿ ಎಂಜೆಲೋ ಬೆಚ್ಯು ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ತಾವು ಮುಂಬರುವ ಕಾನ್ಕ್ಲೇವ್ (ಪೋಪ್ ಆಯ್ಕೆ ಪ್ರಕ್ರಿಯೆ) ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ತಾನು ನಿರಪರಾಧಿ ಎಂಬುದು ಗೊತ್ತಿದ್ದರೂ ಸಹ ಪೋಪ್ ಫ್ರಾನ್ಸಿಸ್ ಅವರ ನಿರ್ಧಾರವನ್ನು ತಾನು ಗೌರವಿಸುವುದಾಗಿ ಅವರು ಹೇಳಿದ್ದಾರೆ.
"ನಾನು ಈವರೆಗೂ ಪ್ರೀತಿ ಹಾಗೂ ವಿಶ್ವಾಸದಿಂದ ಸೇವೆ ಸಲ್ಲಿಸಿರುವ, ಮುಂದೆಯೂ ಅದೇ ಪ್ರೀತಿ ಹಾಗೂ ವಿಶ್ವಾಸದಿಂದ ಸೇವೆ ಸಲ್ಲಿಸಲಿರುವ ಧರ್ಮಸಭೆಯ ಒಳಿತನ್ನು ಹೃದಯದಲ್ಲಿಟ್ಟುಕೊಂಡು, ಪೋಪ್ ಆಯ್ಕೆ ಪ್ರಕ್ರಿಯೆಗೆ ಸಹಭಾಗಿತ್ವವನ್ನು ಹಾಗೂ ಶಾಂತಿಯನ್ನು ನೀಡುವ ಸಲುವಾಗಿ ನಾನು ಮುಂಬರುವ ಕಾನ್ಕ್ಲೇವ್ (ಪೋಪ್ ಆಯ್ಕೆ ಪ್ರಕ್ರಿಯೆ) ನಲ್ಲಿ ಭಾಗವಹಿಸುವುದಿಲ್ಲ ಎಂದು ಕಾರ್ಡಿನಲ್ ಬೆಚ್ಯು ಅವರು ಹೇಳಿದ್ದಾರೆ.