ಹುಡುಕಿ

ಸ್ಪೇನ್ ದೇಶದಲ್ಲಿನ ವಲಸಿಗರಿಗೆ ಧರ್ಮಸಭೆಯ ಸಂಸ್ಥೆಗಳಿಂದ ನೆರವಿನ ಕಾರುಣ್ಯ

ಸ್ಪೇನ್ ದೇಶದಲ್ಲಿನ ವಲಸಿಗರಿಗೆ ಧರ್ಮಸಭೆಯ ಸಂಸ್ಥೆಗಳು ಎಲ್ಲಾ ರೀತಿಯ ನೆರವನ್ನು ನೀಡುತ್ತಿವೆ. ವಿಶೇಷವಾಗಿ ಆಫ್ರಿಕಾ ದೇಶದಿಂದ ಯುರೋಪಿಗೆ ಪ್ರವೇಶಿಸಲು ಪ್ರಯತ್ನಿಸುವ ವಲಸಿಗರಿಗೆ ಮಾನವೀಯ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವನ್ನು ನೀಡುವಲ್ಲಿ ಇಲ್ಲಿನ ಧರ್ಮಸಭೆಯ ಸಂಸ್ಥೆಗಳು ಶ್ರಮಿಸುತ್ತಿವೆ.

ವರದಿ: ವ್ಯಾಟಿಕನ್ ನ್ಯೂಸ್

ಯೂರೋಪ್ ಖಂಡಕ್ಕೆ ಪ್ರವೇಶಿಸಲು ಪ್ರಯತ್ನಿಸುವ ವಲಸಿಗರಿಗೆ ಅತಿ ದೊಡ್ಡ ಸಮಸ್ಯೆ ಎಂದರೆ ಮಾನವ ಕಳ್ಳ ಸಾಗಣೆ. ಮಾನವ ಕಳ್ಳ ಸಾಗಣೆಯ ನಿಮಿತ್ತ ನೂರಾರು ಜನರು ಅಪರಾಧಿಕ ಜಾಲಕ್ಕೆ ಸಿಕ್ಕಿ ಜೀವಗಳನ್ನು ಕಳೆದುಕೊಳ್ಳುತ್ತಾರೆ ಹಾಗೂ ಈ ನತದೃಷ್ಟ ಜನರನ್ನು ಮಾರಾಟ ಮಾಡಲಾಗುತ್ತದೆ. ಈ ಪ್ರಯತ್ನಗಳಿಂದ ಪ್ರಾಕೃತಿಕ ವಿಕೋಪಗಳಿಗೆ, ಆಂತರಿಕ ಕಲಹಗಳಿಗೆ, ಪರಸ್ಪರ ವೈಶಮ್ಯಕ್ಕೆ ತುತ್ತಾಗಿ ಪ್ರಾಣ ಬಿಡುವವರ ಸಂಖ್ಯೆಯು ಅಧಿಕವಾಗಿದೆ. ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ತಮ್ಮ ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಪ್ರಯಾಣವನ್ನು ಕೈಗೊಳ್ಳುವ ಈ ಜನರಿಗೆ ಉತ್ತಮ ಭವಿಷ್ಯದ ಕನಸನ್ನು ಬಿಟ್ಟರೆ ಬೇರೇನೂ ಇರುವುದಿಲ್ಲ. ಕಷ್ಟಪಟ್ಟು, ನಿರಂತರ ದುಡಿದು, ಕೂಡಿಟ್ಟ ಹಣವು ಸಹ ಹಲವಾರು ಬಾರಿ ಬೇರೆಯವರ ಕೈವಶವಾಗುವ ಸಾಧ್ಯತೆಗಳು ಇರುತ್ತದೆ. ಹೀಗೆ, ನಮ್ಮ ದೇಶವನ್ನು ಬಿಟ್ಟು ಯುರೋಪ್ ದೇಶಗಳಿಗೆ ವಲಸೆ ಬಂದಿರುವ ಒಬ್ಬೊಬ್ಬರ ಕರುಣಾಜನಕ ಕಥೆಗಳನ್ನು ಆಲಿಸುತ್ತಿದ್ದರೆ ಅವರ ಪ್ರಕಾರ ಅವರ ಪ್ರಯಾಣವು ಅಕ್ಷರಶಹ ನರಕ ಸದೃಶವಾಗಿರುತ್ತದೆ.

ಹೀಗೆ, ಉತ್ತಮ ಬದುಕನ್ನು ಅರಸುತ್ತ ಹೊರಡುವ ಈ ವಲಸಿಗರಿಗೆ ಧರ್ಮಸಭೆಯ ಸಂಸ್ಥೆಗಳು ದಾರಿದೀಪಗಳಂತೆ ಗೋಚರಿಸುತ್ತವೆ. ವಲಸಿಗರ ಆರ್ಥಿಕ ಸಾಮಾಜಿಕ ಆಧ್ಯಾತ್ಮಿಕ ಅವಶ್ಯಕತೆಗಳಿಗೆ ಕೈಲಾದಷ್ಟು ಹಾಗೂ ತಮ್ಮ ಪರಿಧಿಯನ್ನು ಮೀರಿ ಸಹಾಯವನ್ನು ನೀಡುವ ಈ ಸಂಸ್ಥೆಗಳು, ಅವರು ಸುರಕ್ಷಿತವಾಗಿ ಮತ್ತೊಂದು ದೇಶಕ್ಕೆ ತೆರಳಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ನೆರವಾಗುತ್ತವೆ.

ಇಂತಹ ಸೇವಕಾರ್ಯಗಳನ್ನು ಮಾಡುತ್ತಿರುವ ಧರ್ಮಸಭೆಯ ಸಂಸ್ಥೆಗಳಲ್ಲಿ ಒಂದು ಪ್ರಮುಖ ಸಂಸ್ಥೆ ಎಂದರೆ ಸ್ಪೇನ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿವಿಧ ದೇಶಗಳಿಂದ ಯೂರೋಪ್ ದೇಶಗಳಿಗೆ ವಲಸೆ ಹೋಗುವ ವಲಸಿಗರಿಗೆ ಅವರು ಸುರಕ್ಷಿತವಾಗಿ ತೆರಳಲು ಹಾಗೂ
ತಮ್ಮ ಕನಸುಗಳನ್ನು ಕಟ್ಟಿಕೊಳ್ಳಲು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ. ಈ ಸಂಸ್ಥೆಯನ್ನು ನಡೆಸುತ್ತಿರುವವರ ಪ್ರಕಾರ ಅವರ ಕಾರ್ಯವು ಧರ್ಮಸಭೆಯ ಶುಭ ಸಂದೇಶದ ಮೌಲ್ಯಗಳಿಂದ ಪ್ರೇರಿತವಾಗಿದೆ. ಅವರ ಈ ಸೇವಾ ಕಾರ್ಯದಲ್ಲಿ ಬಹಳಷ್ಟು ಜನರು ಕೈಜೋಡಿಸಿರುವುದು, ಮಾನವೀಯ ಕಾರ್ಯಗಳಿಗೆ ಸೇವೆಯನ್ನು ಮತ್ತಷ್ಟು ಸಲ್ಲಿಸಲು ಅವರಿಗೆ ಸ್ಪೂರ್ತಿಯಾಗಿದೆ ಎಂದು ಹೇಳುತ್ತಾರೆ.

01 May 2024, 16:38