ಉತ್ತಮ ಭವಿಷ್ಯದ ದೃಷ್ಟಿಕೋನದಿಂದ ಮತ ಚಲಾಯಿಸಲು ಕೆನಡಾದ ಧರ್ಮಾಧ್ಯಕ್ಷರುಗಳು ಕಥೋಲಿಕರಿಗೆ ಕರೆ ನೀಡುತ್ತಾರೆ
ಲಿಸಾ ಝೆಂಗಾರಿನಿ
ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪ್ರಧಾನಿ ಜಸ್ಟಿನ್ ಟ್ರುಡೊರವರು ಮಾರ್ಚ್ ತಿಂಗಳಿನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಹೊಸ ಫೆಡರಲ್ ಸರ್ಕಾರವನ್ನು ಆಯ್ಕೆ ಮಾಡಲು ಲಕ್ಷಾಂತರ ಕೆನಡದವರು ಸೋಮವಾರ ಮತದಾನಕ್ಕೆ ತೆರಳುತ್ತಿದ್ದಾರೆ. ಲಿಬರಲ್ ಪಕ್ಷದ ಹೊಸ ನಾಯಕ ಮತ್ತು ಮಧ್ಯಂತರ ಪ್ರಧಾನಿ ಮಾರ್ಕ್ ಕಾರ್ನಿರವರು ಮತ್ತು ಕನ್ಸರ್ವೇಟಿವ್ ವಿರೋಧ ಪಕ್ಷದ ನಾಯಕ ಪಿಯರೆ ಪೊಲಿವ್ರೆ ಇಬ್ಬರು ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ರಾಷ್ಟ್ರವು ಎದುರುಸುತ್ತಿರುವ ಸವಾಲುಗಳ ಬಗ್ಗೆ ಆಳವಾಗಿ ಚಿಂತಿಸಲು ಕರೆ
ಮತದಾನಕ್ಕೆ ಮುಂಚಿತವಾಗಿ, ಕೆನಡಿಯದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಶಾಶ್ವತ ಮಂಡಳಿಯು, ಉತ್ತಮ ಭವಿಷ್ಯದ ಬಗ್ಗೆ ಭರವಸೆ ಮತ್ತು ದೃಷ್ಟಿಕೋನದೊಂದಿಗೆ ರಾಷ್ಟ್ರದ ಸವಾಲುಗಳನ್ನು ಆಳವಾಗಿ ಚಿಂತಿಸಲು ಭಕ್ತವಿಶ್ವಾಸಿಗಳಿಗೆ ಕರೆ ನೀಡಿದೆ. ಏಪ್ರಿಲ್ 23 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಧರ್ಮಾಧ್ಯಕ್ಷರುಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಮಾನ್ಯ ಒಳಿತನ್ನು ಪೂರೈಸುವ ನೀತಿಗಳಿಗೆ ಮತ ಚಲಾಯಿಸುವ ಎಲ್ಲಾ ಅರ್ಹ ನಾಗರಿಕರ ಜವಾಬ್ದಾರಿಯನ್ನು ಒತ್ತಿ ಹೇಳಿದರು.
ಕಥೋಲಿಕರ ವಿಶ್ವಾಸವು ಅಗತ್ಯವಾದ ನೈತಿಕ ಮತ್ತು ಸಾಮಾಜಿಕ ಮಾರ್ಗದರ್ಶನವನ್ನು ಒದಗಿಸುತ್ತದೆ ಎಂದು ಧರ್ಮಾಧ್ಯಕ್ಷರುಗಳು ನೆನಪಿಸುತ್ತಾರೆ, ಇದು "ದೇಶವು ಎದುರಿಸುತ್ತಿರುವ ನಿರ್ಣಾಯಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ, ಉದಾಹರಣೆಗೆ ಬದುಕುವ ಹಕ್ಕು - ಗರ್ಭಧಾರಣೆಯಿಂದ ನೈಸರ್ಗಿಕ ಸಾವಿನವರೆಗೆ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬದುಕುವ ಹಕ್ಕು ಮತ್ತು ಮಾನವ ಘನತೆ
ಈ ಹಕ್ಕನ್ನು - ಹುಟ್ಟಲಿರುವ ಶಿಶುಗಳಿಗೆ ಕಾನೂನು ರಕ್ಷಣೆಯ ಕೊರತೆ, ಸಾಯುತ್ತಿರುವಾಗ ವೈದ್ಯಕೀಯ ಸಹಾಯ (MAiD) ಅರ್ಹತೆಯ ನಿರಂತರ ವಿಸ್ತರಣೆ ಮತ್ತು ಜೀವನದ ಅಂತ್ಯದಲ್ಲಿ ಬಳಲುತ್ತಿರುವವರಿಗೆ ಸರ್ಕಾರದಿಂದ ಉತ್ತಮ ಗುಣಮಟ್ಟದ ಉಪಶಾಮಕ ಆರೈಕೆಯ ಸಾಕಷ್ಟು ಲಭ್ಯವಿಲ್ಲದ ಕಾರಣ ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಗಮನಿಸುತ್ತಾರೆ.
ಬಡತನ, ಮಾನವ ಕಳ್ಳಸಾಗಣೆ, ಮಾನಸಿಕ ಅಸ್ವಸ್ಥತೆ ಮತ್ತು ವಲಸಿಗರ ಚಿಕಿತ್ಸೆಯ ಬಗ್ಗೆ ಧರ್ಮಾಧ್ಯಕ್ಷರುಗಳು ಕಳವಳಗಳನ್ನು ಎತ್ತಿ ತೋರಿಸಿದರು.
ಧಾರ್ಮಿಕ ಸ್ವಾತಂತ್ರ್ಯ, ಒಗ್ಗಟ್ಟು ಮತ್ತು ಕುಟುಂಬ
ಧಾರ್ಮಿಕ ಸಮುದಾಯಗಳ ಬಗ್ಗೆ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಅವರ ದತ್ತಿ ತೆರಿಗೆ ಸ್ಥಿತಿಗೆ ಇರುವ ಸಂಭಾವ್ಯ ಬೆದರಿಕೆಗಳ ಬಗ್ಗೆ ಅವರು ಮತ್ತಷ್ಟು ಕಳವಳ ವ್ಯಕ್ತಪಡಿಸಿದರು.
ಈ ವಿಷಯಗಳ ಜೊತೆಗೆ, ಸಮಾಜದಲ್ಲಿ ಕುಟುಂಬವು ಮೂಲಾಧಾರವಾಗಿದ್ದು, ಮಾನವ ಘನತೆಗೆ ಗೌರವ, ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ನ್ಯಾಯ ಮತ್ತು ಒಗ್ಗಟ್ಟಿನಲ್ಲಿ ಬೇರೂರಿರುವ ರಾಷ್ಟ್ರೀಯ ಆರ್ಥಿಕ ದೃಷ್ಟಿಕೋನವನ್ನು ಬೆಂಬಲಿಸುವ ನೀತಿಗಳಿಗೆ ಕರೆ ನೀಡಿದೆ.
ಈ ವಿಷಯಗಳ ಬಗ್ಗೆ ತಮ್ಮ ಆತ್ಮಸಾಕ್ಷಿಯಿಂದ ಪ್ರಾರ್ಥನಾಪೂರ್ವಕವಾಗಿ ಚಿಂತಿಸಿ, ಅದಕ್ಕೆ ಅನುಗುಣವಾಗಿ ಮತ ಚಲಾಯಿಸುವಂತೆ ಧರ್ಮಾಧ್ಯಕ್ಷರುಗಳು ಭಕ್ತವಿಶ್ವಾಸಿಗಳನ್ನು ಒತ್ತಾಯಿಸಿದರು. ಚುನಾವಣೆ ಸಮೀಪಿಸುತ್ತಿದ್ದಂತೆ, ಕಥೊಲಿಕರು ದೇಶಕ್ಕಾಗಿ, ಅದರ ರಾಜಕೀಯ ಅಭ್ಯರ್ಥಿಗಳಿಗಾಗಿ ಮತ್ತು ಅವರ ಸಹವರ್ತಿ ನಾಗರಿಕರಿಗಾಗಿ ಪ್ರಾರ್ಥನೆಯಲ್ಲಿ ಒಂದಾಗಲು ಪ್ರೋತ್ಸಾಹಿಸಲಾಗುತ್ತದೆ, ನ್ಯಾಯ ಮತ್ತು ಸಾಮಾನ್ಯ ಒಳಿತನ್ನು ಎತ್ತಿಹಿಡಿಯುವ ನಾಯಕರನ್ನು ಆಯ್ಕೆ ಮಾಡುವಲ್ಲಿ ದೇವರ ಮಾರ್ಗದರ್ಶನವನ್ನು ಕೇಳಲಾಗುತ್ತದೆ.