ಸೆರ್ಕಾಸ್: ಪ್ರಪ್ರಥಮವಾಗಿ ಮತ್ತು ಅಗ್ರಗಣ್ಯವಾಗಿ, ವಿಶ್ವಗುರು ಫ್ರಾನ್ಸಿಸ್ ರವರು ಒಬ್ಬ ಯಾಜಕರಾಗಿದ್ದರು
ಆಂಡ್ರಿಯಾ ಟೋರ್ನಿಯೆಲ್ಲಿ
ವಿಶ್ವಗುರುಗಳ ಮಂಗೋಲಿಯಾ ಪ್ರಯಾಣದ ಕುರಿತಾದ ತಮ್ಮ ಪುಸ್ತಕ 'ದಿ ಮ್ಯಾಡ್‌ಮ್ಯಾನ್ ಆಫ್ ಗಾಡ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್' ನಲ್ಲಿ, ಜೇವಿಯರ್ ಸೆರ್ಕಾಸ್ ರವರು ವಿಶ್ವಗುರು ಫ್ರಾನ್ಸಿಸ್ ರವರನ್ನು ಒಬ್ಬ ವಿನಮ್ರ ಕುರುಬ ಎಂದು ಬಣ್ಣಿಸಿದ್ದಾರೆ. ಆರಂಭಿಕ ಕ್ಷಣದಲ್ಲಿ, ನೀವು ಅವರೊಂದಿಗೆ ಮಾತನಾಡುವಾಗ, 'ಹೌದು, ಇವರು ವಿಶ್ವಗುರು' ಎಂದು ಭಾವಿಸಿದಾಗ, ಎಲ್ಲಕ್ಕಿಂತ ಹೆಚ್ಚಾಗಿ, ಈ ವ್ಯಕ್ತಿ ಒಬ್ಬ ಯಾಜಕ ಅಥವಾ ಧರ್ಮಗುರು ಎಂದು, ಅವರ ಸರಳ ಸಂಭಾಷಣೆಯಲ್ಲಿಯೇ ನೀವು ಬೇಗನೆ ಅರಿತುಕೊಳ್ಳುತ್ತೀರಿ" ಎಂದು ಅವರು ಬರೆಯುತ್ತಾರೆ.
ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ಸ್ವಲ್ಪ ಸಮಯದ ನಂತರ ವ್ಯಾಟಿಕನ್ ಸುದ್ಧಿಯ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸೆರ್ಕಾಸ್ ರವರು, ದುಃಖದ ಸುದ್ದಿಗೆ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡರು.
ನನಗೆ ನಿಜಕ್ಕೂ ಆಘಾತವಾಯಿತು. ಇತರ ಅನೇಕರಂತೆ, ಅವರು ಅಪಾಯದಿಂದ ಪಾರಾಗಿದ್ದಾರೆಂದು ನಾನು ಭಾವಿಸಿದೆ, ವಿಶೇಷವಾಗಿ ಅವರು ಹಿಂದಿನ ದಿನ ಸೇಂಟ್ ಪೀಟರ್ಸ್ ಚೌಕದಲ್ಲಿ ಕಾಣಿಸಿಕೊಂಡಿದ್ದನ್ನು ಪರಿಗಣಿಸಿದಾಗ. ನನಗೆ ತುಂಬಾ ಹತ್ತಿರವಾದ ಯಾರೋ ಸತ್ತಂತೆ ಭಾಸವಾಯಿತು. ಅದು ನನ್ನನ್ನು ಹೇಗೆ ಬಾಧಿಸಿತೆಂದರೆ, ನನಗೆ ತುಂಬಾ ದುಃಖವಾಗಿದೆ.
ವಿಶ್ವಗುರು ಫ್ರಾನ್ಸಿಸ್ ರವರಬಗ್ಗೆ ಸೆರ್ಕಾಸ್‌ಗೆ ಹೆಚ್ಚು ಪ್ರಭಾವ ಬೀರಿದ್ದು ಅವರು ಹೊರಸೂಸುವ, ಅವರ ಪಿತೃತ್ವದ ಭಾವನೆ. "ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ, ತಮ್ಮ ನ್ಯೂನತೆಗಳನ್ನು ಮರೆಮಾಡದ ಮತ್ತು ತಮ್ಮನ್ನು ಕೇವಲ ಸಾಮಾನ್ಯ ಮನುಷ್ಯನಂತೆ ಪ್ರಸ್ತುತಪಡಿಸಿದ ವಿಶ್ವಗುರುವಾಗಿದ್ದರು. ಅವರ ಈ ಸ್ವಭಾವು, ಜನರು ಅವರನ್ನು ಒಬ್ಬ ತಂದೆಯಂತೆ ನೋಡಲು ಅವಕಾಶ ಮಾಡಿಕೊಟ್ಟಿತು. ಖಂಡಿತವಾಗಿಯೂ, ವಿಶ್ವಗುರು ಫ್ರಾನ್ಸಿಸ್ ರವರನ್ನು ಅನೇಕರು, ಬಹುತೇಕ 'ಅರೆ-ದೈವಿಕ' ವ್ಯಕ್ತಿಯಾಗಬೇಕೆಂದು ನಿರೀಕ್ಷಿಸುವ ಕಥೊಲಿಕರು ಇದ್ದಾರೆ. ಆದರೆ ವಿಶ್ವಗುರು, ಮೊದಲನೆಯದಾಗಿ, ಒಬ್ಬ ಸಾಧಾರಣ ಮನುಷ್ಯ ಎಂದು ನಾನು ಭಾವಿಸುತ್ತೇನೆ. ಸಂತ ಪೇತ್ರರು ಒಬ್ಬ ಮನುಷ್ಯ - ಮೊದಲ ವಿಶ್ವಗುರು ಆಳವಾಗಿ ದೋಷಪೂರಿತರಾಗಿದ್ದರು ಮತ್ತು ಮೂರು ಬಾರಿ ಕ್ರಿಸ್ತರನ್ನು ನಿರಾಕರಿಸಿದರು. ಧರ್ಮಸಭೆಯು ದುರ್ಬಲರಿಗೆ, ಪಾಪಿಗಳಿಗೆ ಒಂದು ಅವಕಾಶದ ಮೂಲಕ ಮನಪರಿವರ್ತನೆಯಾಗಲು ಕರೆ ನೀಡುವ ಒಂದು ಪವಿತ್ರ ಸ್ಥಳವಾಗಿದೆ.
ಈ ನಮ್ರತೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸೆರ್ಕಾಸ್ ರವರು ಒತ್ತಿ ಹೇಳಿದರು. "ಅವನು 'ನಾನು ಒಬ್ಬ ಸೂಪರ್‌ಮ್ಯಾನ್ ಅಲ್ಲ - ನಾನು ಕೇವಲ ಒಬ್ಬ ವ್ಯಕ್ತಿ' ಎಂದು ಹೇಳುತ್ತಿರುವಂತೆ ಭಾಸವಾಗುತ್ತದೆ." ನಾನು ಒಬ್ಬ ಸಾಧಾರಣ ಮನುಷ್ಯನಾಗಿದ್ದರು, ದೇವರು ಕೊಟ್ಟ ಈ ನಾಯಕತ್ವದ ಪಾತ್ರವನ್ನು ಒಪ್ಪಿಕೊಂಡ ನಂತರ ಅವರು ಸಿಸ್ಟೀನ್ ಪ್ರಾರ್ಥನಾ ಮಂದಿರದಲ್ಲಿ ಮೊದಲು ಹೇಳಿದ್ದು "ನಾನು ಪಾಪಿಯಾದರೂ, ದೇವರ ಚಿತ್ತವನ್ನು ಒಪ್ಪಿಕೊಳ್ಳುತ್ತೇನೆ" ಎಂದು ಎಂದು ನನಗೆ ನೆನಪಿದೆ. ಅವರ ಸ್ವಂತ ಮಾನವೀಯತೆ ಮತ್ತು ದುರ್ಬಲತೆಯ ಅರಿವು ನನಗೆ ಜೀರ್ಣಿಸಲು ಅಸಾಧಾರಣವಾಗಿದೆ. ಜಾನ್ XXIII ಬಗ್ಗೆ ಹನ್ನಾ ಅರೆಂಡ್ ಹೇಳಿದ್ದನ್ನು ವಿಶ್ವಗುರು ಫ್ರಾನ್ಸಿಸ್ ರವರಿಗೂ ಹೇಳಬಹುದು, ಅವರು ಸಂತ ಪೇತ್ರರ ಸಿಂಹಾಸನದ ಮೇಲೆ ಕುಳಿತ ಒಬ್ಬ ಕ್ರೈಸ್ತಎಂದು.