ಹುಡುಕಿ

FILES-NICARAGUA-GOVERNMENT-RELIGION-TAXATION FILES-NICARAGUA-GOVERNMENT-RELIGION-TAXATION  (AFP or licensors)

ನಿಕರಾಗುವಾದಲ್ಲಿ ಪವಿತ್ರ ವಾರದ ಆಚರಣೆಯನ್ನು ನಿಷೇಧಿಸಲಾಗಿದೆ

2023 ರಿಂದ, ಸಾರ್ವಜನಿಕ ಮೆರವಣಿಗೆಗಳನ್ನು ನಿಷೇಧಿಸಲಾಗಿತ್ತು ಮತ್ತು ಈಗ ಈ ಕ್ರಮವು ಶುಭ ಶುಕ್ರವಾರದ ಶಿಲುಬೆ ಹಾದಿಯ ಆಚರಣೆಗೂ ಅನ್ವಯಿಸುತ್ತದೆ.

ವ್ಯಾಟಿಕನ್ ಸುದ್ದಿ

ನಿಕರಾಗುವಾದಲ್ಲಿ, ಈಸ್ಟರ್ ಮೆರವಣಿಗೆಗಳು ಮತ್ತು ಪಟಾಕಿಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪವಿತ್ರ ವಾರದ ಆಚರಣೆಗಳ ಮೇಲೆ ಸರ್ಕಾರ ತೆಗೆದುಕೊಂಡಿರುವ ಕಠಿಣ ಕ್ರಮಗಳು ಈಸ್ಟರ್ ಸಮಯದಲ್ಲಿ ಸಾರ್ವಜನಿಕ ಕ್ರೈಸ್ತ ಧರ್ಮಸಭೆಯ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ಅಧ್ಯಕ್ಷ ಡೇನಿಯಲ್ ಒರ್ಟೆಗಾರವರು ಬೀದಿಗಳಲ್ಲಿ ಪವಿತ್ರ ಮೂರ್ತಿಗಳನ್ನು ಸಾಗಿಸುವುದನ್ನು ನಿಷೇಧಿಸಿದ್ದಾರೆ ಮತ್ತು ಪ್ರಧಾನಾಲಯಗಳ ಹೊರಗೆ ದೊಡ್ಡ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

2023 ರಿಂದ, ಗರಿಗಳ ಭಾನುವಾರದಂತಹ ಸಾರ್ವಜನಿಕ ಮೆರವಣಿಗೆಗಳನ್ನು ಮಧ್ಯ ಅಮೇರಿಕಾದ ದೇಶದಲ್ಲಿ ನಿಷೇಧಿಸಲಾಗಿದೆ. ಅವು ದೇವಾಲಯದ ಗೋಡೆಗಳ ಒಳಗೆ ಮಾತ್ರ ಕಟ್ಟುನಿಟ್ಟಾಗಿ ನಡೆಯಬಹುದು. ಶುಭ ಶುಕ್ರವಾರದ ಶಿಲುಬೆ ಹಾದಿಯ ಆಚರಣೆಗೂ ಇದೇ ಕ್ರಮ ಅನ್ವಯಿಸುತ್ತದೆ. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಹಲವಾರು ಯಾಜಕರು, ರದ್ದು ಮಾಡಿದ ಮೆರವಣಿಗೆಯ ನಿಯಮವನ್ನು ಅಥವಾ ನಿಷೇಧವನ್ನು ಉಲ್ಲಂಘಿಸುವವರನ್ನು ಬಂಧಿಸಲಾಗುವುದು ಎಂದು ಗುರುಗಳಿಗೆ ಹೇಳಿದರು.

ಪವಿತ್ರ ವಾರದ ಆಚರಣೆಗಳ ಕೇಂದ್ರ ಭಾಗವಾದ ಮೆರವಣಿಗೆಗಳನ್ನು ನಡೆಸಲು ಅಸಮರ್ಥತೆಯು ದೇಶದ ಧಾರ್ಮಿಕ ಜೀವನಕ್ಕೆ ಭಾರೀ ಹೊಡೆತವಾಗಿದೆ" ಎಂದು 100% ನೋಟಿಸಿಯಾಸ್ ಜಾಲತಾಣವು ಬರೆಯುತ್ತದೆ. ಅದೇ ರೀತಿ, ನಿಕರಾಗುವಾದಲ್ಲಿನ ಪರಿಸ್ಥಿತಿ, ವಲಸಿಗರು ಮತ್ತು ರಾಜಕೀಯ ಕೈದಿಗಳಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಪ್ರಾರ್ಥಿಸುವುದನ್ನು, ನಿಷೇಧಿಸುವುದು ನ್ಯಾಯ ಮತ್ತು ಮಾನವ ಹಕ್ಕುಗಳ ವಿಷಯಗಳಲ್ಲಿ ದರ್ಮಸಭೆಯ ಧ್ವನಿಯನ್ನು ಅಡಗಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ.

 

18 ಏಪ್ರಿಲ್ 2025, 15:38