ಈಸ್ಟರ್ ಹಬ್ಬಕ್ಕೆ ನೂರಾರು ಕೈದಿಗಳನ್ನು ವಿನಿಮಯ ಮಾಡಿಕೊಂಡ ರಷ್ಯಾ ಮತ್ತು ಉಕ್ರೇನ್
ಸ್ಟೀಫನ್ ಜೆ. ಬೋಸ್
ಈ ವರ್ಷ ಉಕ್ರೇನ್‌ನಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಈಸ್ಟರ್ ಹಬ್ಬದ ಸಂದರ್ಭದಲ್ಲಿ ದುಃಖವು ಜೊತೆಗೂಡಿದೆ: ರಷ್ಯಾವು ಶನಿವಾರ ಉಕ್ರೇನ್ ಮೇಲೆ ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ಎಂಟು ಕ್ಷಿಪಣಿಗಳು ಮತ್ತು 87 ಡ್ರೋನ್‌ಗಳನ್ನು ಉಡಾಯಿಸಿದೆ ಎಂದು ಉಕ್ರೇನಿಯದ ವಾಯುಪಡೆ ಹೇಳಿದೆ, ಇದು ದೇಶಾದ್ಯಂತ ಐದು ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ.
ಕಳೆದ ಕೆಲವು ವಾರಗಳಲ್ಲಿ ನಡೆದ ಹಿಂದಿನ ದಾಳಿಗಳಲ್ಲಿ ಕನಿಷ್ಠ ಡಜನ್‌ಗಟ್ಟಲೆ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಪ್ರತಿಯಾಗಿ, ರಷ್ಯಾದ ರಕ್ಷಣಾ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ ಉಕ್ರೇನ್ ರಷ್ಯಾದ ಇಂಧನ ಸೌಲಭ್ಯಗಳನ್ನು 10 ಬಾರಿ ದಾಳಿ ಮಾಡಿದೆ ಎಂದು ಶನಿವಾರ ಆರೋಪಿಸಿದೆ.
ಮಾರ್ಚ್‌ನಲ್ಲಿ ಅಮೇರಿಕದ ಮಧ್ಯಸ್ಥಿಕೆಯ 30 ದಿನಗಳ ನಿಷೇಧವು ಉಕ್ರೇನ್ ಮತ್ತು ರಷ್ಯಾವನ್ನು ಪರಸ್ಪರರ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯಿಂದ ರಕ್ಷಿಸಬೇಕಿತ್ತು.
ಎರಡೂ ರಾಷ್ಟ್ರಗಳು ಪರಸ್ಪರ ಅದನ್ನು ಉಲ್ಲಂಘಿಸುತ್ತಿವೆ ಎಂದು ಪದೇ ಪದೇ ಆರೋಪ ಮಾಡುತ್ತಿವೆ. ಆದರೂ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುತಿನ್ ರವರು ನಿಷೇಧವನ್ನು ಕೊನೆಗೊಳಿಸಲು ಆದೇಶಿಸಿಲ್ಲ ಎಂದು ಕ್ರೆಮ್ಲಿನ್ ವಕ್ತಾರರು ತಿಳಿಸಿದ್ದಾರೆ.
ಪ್ರಕ್ಷುಬ್ಧತೆಯ ನಡುವೆಯೂ, ಯುನೈಟೆಡ್ ಅರಬ್ ಎಮಿರೇಟ್ಸ್, ರಷ್ಯಾ ಮತ್ತು ಉಕ್ರೇನಿಯದ ನೂರಾರು ಯುದ್ಧ ಕೈದಿಗಳನ್ನು ಈಸ್ಟರ್‌ಗೆ ಮನೆಗೆ ತಲುಪಿಸುವ ಒಪ್ಪಂದವನ್ನು ಮಾಡಿಕೊಂಡಿದ್ದರಿಂದ ಸ್ವಲ್ಪ ಭರವಸೆ ಇತ್ತು ಎಂದು ಮೂಲಗಳು ತಿಳಿಸಿವೆ.
ಅಬುಧಾಬಿ ಮಧ್ಯಸ್ಥಿಕೆ ವಹಿಸಲಿರುವ ಇತ್ತೀಚಿನ ವಿನಿಮಯದಲ್ಲಿ ಸುಮಾರು 500 ರಷ್ಯಾದವರನ್ನು ಮತ್ತು ಉಕ್ರೇನಿಯದ ಕೈದಿಗಳು ಹಾಗೂ 46 ಮಂದಿ ಗಾಯಗೊಂಡ ಸೈನಿಕರನ್ನು ವಿನಿಮಯ ಮಾಡಿಕೊಳ್ಳಬೇಕಿತ್ತು.
ವರದಿಯ ಪ್ರಕಾರ, ವಿನಿಮಯದಲ್ಲಿ ಎರಡೂ ಕಡೆಯಿಂದ 246 ಕೈದಿಗಳು ಭಾಗಿಯಾಗಿದ್ದರು.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ರವರು, ಉಕ್ರೇನಿಯದ ಪಡೆಗಳೊಂದಿಗೆ ಹೋರಾಡಿದ್ದಕ್ಕಾಗಿ ರಷ್ಯಾದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿರುವ ಮೆಲ್ಬೋರ್ನ್ ನ ವ್ಯಕ್ತಿ ಆಸ್ಕರ್ ಜೆಂಕಿನ್ಸ್ ರವರು ಬಿಡುಗಡೆಗೆ ಸಹಾಯ ಮಾಡಲು ತಮ್ಮ ಸರ್ಕಾರವು "ಯಾವುದೇ ಮಾರ್ಗಗಳನ್ನು" ಬಳಸುತ್ತದೆ ಎಂದು ಹೇಳಿದರು.
ವ್ಯಾಟಿಕನ್, ಯುದ್ಧ ಕೈದಿಗಳ ಬಿಡುಗಡೆಯನ್ನು ಪ್ರೋತ್ಸಾಹಿಸಿದೆ ಮತ್ತು ವಿಶ್ವಗುರು ಫ್ರಾನ್ಸಿಸ್ ರವರು ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು. ಇದು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಕೊಂದು ಗಾಯಗೊಳಿಸಿದೆ ಎಂದು ವರದಿಯಾಗಿದೆ.