ಹುಡುಕಿ

POPE-JEWS/ POPE-JEWS/ 

ಪೋಪ್ ಫ್ರಾನ್ಸಿಸ್ ರವರಿಗೆ ಗೌರವ: ಅವರ ಸ್ಮರಣೆಯು ಆಶೀರ್ವಾದವಾಗಲಿ

ಗಾಜಾದಲ್ಲಿ ಯುದ್ಧ ಪ್ರಾರಂಭವಾದ ನಂತರ ಸುಮಾರು 400 ರಬ್ಬಿಗಳು ಮತ್ತು ವಿದ್ವಾಂಸರು ಬರೆದ ಹಾಗು ಪ್ರಾದ್ಯಾಪಕರು ಸಹಿ ಮಾಡಿದ ಪತ್ರಗಳಿಗೆ ದಿವಂಗತ ಪೋಪ್ ಫ್ರಾನ್ಸಿಸ್ ರವರು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ಪ್ರತಿಕ್ರಿಯಿಸಿದ ಸ್ಮರನಾರ್ಥಕಗಳನ್ನು ಪ್ರಕಟಿಸಲಾಗುವುದು.

ನಮ್ಮ ಕಥೋಲಿಕ ಸಹೋದರ ಸಹೋದರಿಯರಿಗೆ,

ಫೆಬ್ರವರಿ 2024 ರಲ್ಲಿ, ನಮ್ಮ ಜನರ ಬಹಳ ಸಂಕಷ್ಟದ ಸಮಯದಲ್ಲಿ, ಪೋಪ್ ಫ್ರಾನ್ಸಿಸ್ ಇಸ್ರೇಲ್‌ನಲ್ಲಿರುವ ಯಹೂದಿ ಸಮುದಾಯವನ್ನು ಉದ್ದೇಶಿಸಿ ಸಾಂತ್ವನದ ಮಾತುಗಳನ್ನು ಹೇಳಿದರು, ಧರ್ಮಸಭೆ ಮತ್ತು ಯಹೂದಿ ಜನರು ಸುದೀರ್ಘವಾದ ಯಾತ್ರೆಯಲ್ಲಿ ಒಟ್ಟಿಗೆ ನಡೆದಿದ್ದೇವೆ ಎಂದು ನೆನಪಿಸಿದರು.

ಇಂದು, ನಾವು ಈ ಎರಡು ಸಾವಿರ ವರ್ಷಗಳ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸುತ್ತಿರುವಾಗ, ನಿಮ್ಮ ಪ್ರೀತಿಯ ಮೇಷಪಾಲಕರನ್ನು ಕಳೆದುಕೊಂಡ ದುಃಖದಲ್ಲಿ ಇರುವ ನಿಮಗೆಲ್ಲರಿಗೂ ನಮ್ಮ ಆಳವಾದ ಒಗ್ಗಟ್ಟಿನ ಮತ್ತು ದುಃಖದ ಪ್ರಾಮಾಣಿಕ ಐಕಮತ್ಯದ ಕರಗಳನ್ನು ನಿಮಗೆ ಚಾಚುತ್ತೇವೆ.

ಯಹೂದಿ ಸಂಪ್ರದಾಯದಲ್ಲಿ, "ಅವನ ಸ್ಮರಣೆಯು ಆಶೀರ್ವಾದವಾಗಲಿ" ಎಂದು ಹೇಳುವುದು ಕೇವಲ ದುಃಖವನ್ನು ವ್ಯಕ್ತಪಡಿಸುವುದಲ್ಲ, ಬದಲಾಗಿ ಬದ್ಧತೆಯನ್ನು ತೆಗೆದುಕೊಳ್ಳುವುದು: ಸ್ಮರಣೆಯನ್ನು ಸಕ್ರಿಯಗೊಳಿಸುವುದು, ಸ್ಮರಣೆಯನ್ನು ಕಾರ್ಯರೂಪಕ್ಕೆ ತರುವುದು, ಅಗಲಿದವರು ಜಗತ್ತಿನಲ್ಲಿ ಬಿತ್ತಿದ ಬೋಧನೆಯನ್ನು ಜೀವಂತಗೊಳಿಸುವುದು. ಅಂತಿಮವಾಗಿ, ಅತ್ಯಂತ ಅಧಿಕೃತ ಪ್ರಶಮ್ಸೆಗಳು ಕೇವಲ ತುಟಿಗಳಿಂದ ಮಾತ್ರ ಮಾತನಾಡದೆ ಅವುಗಳನ್ನು ಕಾರ್ಯರೂಪಕ್ಕೆ ತರುವುದುದಾಗಿದೆ.

ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರಿಂದ ಪ್ರೇರಿತರಾದ ಪೋಪ್ ಫ್ರಾನ್ಸಿಸ್ ರವದು ಯಾವಾಗಲೂ ಭಾಷಣಕ್ಕಿಂತ ಕಾರ್ಯರೂಪಕ್ಕೆ ತರುವ ಸಂಕೇತಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತಿದ್ದರು. ಫ್ರಾತ್ತೆಲ್ಲಿ ತುತ್ತಿಯಲ್ಲಿ  ಅವರು ಬರೆದಂತೆ:“ಫ್ರಾನ್ಸಿಸ್ ಮಾತಿನ ಯುದ್ಧ ಮಾಡಲಿಲ್ಲ... ಅವರು ದೇವರ ಪ್ರೀತಿಯನ್ನು ಪಸರಿಸಿದರು... ಈ ರೀತಿಯಾಗಿ, ಅವರು ಎಲ್ಲರಿಗೂ ತಂದೆಯಾದರು ಮತ್ತು ಸಹೋದರ ಸಮಾಜದ ದೃಷ್ಟಿಕೋನವನ್ನು ಪ್ರೇರೇಪಿಸಿದರು.”

ಪೋಪ್ ಫ್ರಾನ್ಸಿಸ್‌ ರವರಿಗಿನ ನಮ್ಮ ಸಂತಾಪಗಳನ್ನು ಪರಿಪೂರ್ಣ ಕ್ರಿಯೆಗಳನ್ನಾಗಿ ಪರಿವರ್ತಿಸೋಣ. ಅವರು ಹೇಳಿದ ಆ ಸಹೋದರ ಸಮಾಜವನ್ನು ಹಂತ ಹಂತವಾಗಿ, ಕಾರ್ಯರೂಪಕ್ಕೆ ತರುವ ಸಂಕೇತಗಳಿಂದ ನಿರ್ಮಿಸೋಣ.

ಅವರ ಸ್ಮರಣೆಯು ಆಶೀರ್ವಾದವಾಗಲಿ.

28 ಏಪ್ರಿಲ್ 2025, 10:04