ಸಾರ್ವಜನಿಕ ಭೇಟಿಯಲ್ಲಿ ವಿಶ್ವಗುರು ಫ್ರಾನ್ಸಿಸ್: ಮಾತೆ ಮರಿಯಮ್ಮನವರ ಸೇವಾ ಮನೋಭಾವವು ದೇವರ ಅನಂತ ಭರವಸೆಯನ್ನು ತೋರಿಸುತ್ತದೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಕುರಿತು ಮಾತನಾಡಿದ್ದಾರೆ. ಮಾತೇ ಬರೆಯಬಹುದು ಕುರಿತು ಮಾತನಾಡಿರುವ ಅವರು ಮಾತೆಯು ಸೇವಾ ಮನೋಭಾವದ ಪ್ರತೀಕವಾಗಿದ್ದಾರೆ. ಅವರಂತೆಯೇ ನಾವು ಸಹ ಸೇವೆಯ ಮನೋಭಾವದಿಂದ ದೇವರ ಭರವಸೆಯನ್ನು ಕಾಣಬೇಕು ಎಂದು ಹೇಳಿದ್ದಾರೆ.
"ಗಾಬ್ರಿಯೇಲ್ ದೇವದೂತನು ಮಾತೆ ಮರಿಯಮ್ಮನವರನ್ನು ಉದ್ದೇಶಿಸಿ ನಮೋ ಮರಿಯೇ, ವರಪ್ರಸಾದ ಪೂರ್ಣೆಯೇ ಎಂದು ಹೇಳುವಾಗ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ ಅದಾಗಲೇ ದೇವರು ಮಾತೆ ಮರಿಯಳಲ್ಲಿ ದೇವರು ಜೀವಿಸುತ್ತಿದ್ದಾರೆ. ಆದುದರಿಂದ ಅವರು ದೇವರ ವರಪ್ರಸಾದದಿಂದ ಆವೃತ್ತವಾಗಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಮುಂದುವರೆದು ಮಾತನಾಡಿದ ಅವರು ನಾವೂ ಸಹ ಮಾತೆ ಮರಿಯಮ್ಮನವರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು. ದೇವರ ಚಿತ್ತಕ್ಕೆ ಅವರಂತೆಯೇ ತಲೆ ಬಾಗಬೇಕು. ಅವರ ವಾಕ್ಯಗಳನ್ನು ನಮ್ಮ ಬಾಳಿನಲ್ಲಿ ಆಳವಡಿಸಿಕೊಂಡು ಮುನ್ನಡೆಯಬೇಕು. ಈ ಜ್ಯೂಬಿಲಿ ವರ್ಷದಲ್ಲಿ ನಾವು ಸದಾ ಆಧ್ಯಾತ್ಮಿಕವಾಗಿ, ಸಹೋದರ ಸಹೋದರಿಯರಾಗಿ ಜೀವಿಸಬೇಕೆಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳಿಗೆ ಕಿವಿಮಾತನ್ನು ಹಾಗೂ ಮಾರ್ಗದರ್ಶನವನ್ನೂ ನೀಡಿದ್ದಾರೆ.
ಇದೇ ರೀತಿ ದೇವರೂ ಸಹ ನಮ್ಮ ಹೃದಯಗಳಲ್ಲಿ ಜೀವಿಸುತ್ತಾರೆ. ಅವರು ಸದಾ ನಮ್ಮೊಡನೆ ಮಾತನಾಡುತ್ತಾರೆ. ಆದರೆ ನಾವು ಅವರ ಮಾತನ್ನು ಕೇಳಬೇಕೆಂದರೆ ಮೌನದಿಂದಿದ್ದು ಆಲಿಸಬೇಕಿದೆ. ಆಗ ಮಾತ್ರ ನಾವು ದೇವರ ಮುಖವನ್ನು ಕಾಣಬಹುದು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.