ಪೋಪ್ ಫ್ರಾನ್ಸಿಸ್: ಸ್ವರ್ಗೀಯ ತಂದೆ ನಮಗಾಗಿ ಕಾಯುತ್ತಿದ್ದಾರೆ
ವರದಿ: ವ್ಯಾಟಿಕನ್ ನ್ಯೂಸ್
ಇಂದು ಪೋಪ್ ಫ್ರಾನ್ಸಿಸ್ ಅವರ ಸಾರ್ವಜನಿಕ ಭೇಟಿಯ ಸಂದೇಶವನ್ನು ವ್ಯಾಟಿಕನ್ನಿನಲ್ಲಿ ಓದಲಾಯಿತು. ಎಂದಿನಂತೆ ಪೋಪ್ ಫ್ರಾನ್ಸಿಸ್ ಅವರು ಇಂದೂ ಸಹ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ವ್ಯಾಟಿಕನ್ ಮಾಧ್ಯಮ ಕಚೇರಿಯು ಅವರ ಸಂದೇಶವನ್ನು ಭಕ್ತಾಧಿಗಳೊಂದಿಗೆ ಹಂಚಿಕೊಂಡಿದೆ.
"ತಂದೆ ನಮಗಾಗಿ ಕಾಯುತ್ತಿದ್ದಾರೆಂದು ನಮಗೆ ತಿಳಿದಿರುವುದರಿಂದ ನಾವು ಭರವಸೆಯನ್ನು ಹೊಂದಬಹುದು... " ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಮಾರ್ಚ್ 23 ರ ಭಾನುವಾರದಂದು ರೋಮ್‌ನ ಜೆಮೆಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಪೋಪ್ ಫ್ರಾನ್ಸಿಸ್ ವ್ಯಾಟಿಕನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಂತೆ, ಅವರು ಬುಧವಾರದ ಭಕ್ತಾಧಿಗಳಿಗಾಗಿ ಸಿದ್ಧಪಡಿಸಿದ ಪಠ್ಯದಲ್ಲಿ ಈ ಸಾಂತ್ವನದಾಯಕ ಮಾತುಗಳನ್ನು ಹೇಳಿದರು. ತಮ್ಮ ಸಂದೇಶವನ್ನು ಪ್ರಕಟಿಸುವಂತೆ ಅವರು ವ್ಯಾಟಿಕನ್ನಿನ ಮಾಧ್ಯಮ ಕಚೇರಿಗೆ ಮನವಿ ಮಾಡಿಕೊಂಡರು.
ವೈದ್ಯರು ಪೋಪ್ ಫ್ರಾನ್ಸಿಸ್ ಅವರಿಗೆ ಎರಡು ತಿಂಗಳುಗಳ ಕಾಲ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಾರ್ವಜನಿಕ ಭೇಟಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ದುಂದುಗಾರ ಮಗನ ಸಾಮತಿಯನ್ನು ಪ್ರಸ್ತಾಪಿಸಿ, ಅದರ ಚಿಂತನೆಯಲ್ಲಿ ಮಾತನಾಡುತ್ತಾ, ಸ್ವರ್ಗೀಯ ತಂದೆ ನಮಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.
ನಿಜವಾದ ಪ್ರೀತಿಯ ಕುರಿತು ಮಾತನಾಡಿದ ಅವರು ""ನಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಮಾತ್ರ ಪ್ರೀತಿಯ ಈ ತಪ್ಪು ದೃಷ್ಟಿಕೋನದಿಂದ ನಮ್ಮನ್ನು ಮುಕ್ತಗೊಳಿಸಬಹುದು" ಎಂದು ಅವರು ಹೇಳಿದರು. "ದೇವರೊಂದಿಗಿನ ನಮ್ಮ ಸಂಬಂಧದಲ್ಲಿ, ನಾವು ಅದನ್ನೇ ಅನುಭವಿಸುತ್ತೇವೆ" ಎಂದು ಪೋಪ್ ಫ್ರಾನ್ಸಿಸ್ ಅವರು ದೇವರ ನೈಜ ಪ್ರೀತಿಯ ಕುರಿತು ನುಡಿದಿದ್ದಾರೆ.