ಜ್ಯೂಬಿಲಿ ಭೇಟಿಯಲ್ಲಿ ಪೋಪ್" ಜ್ಯೂಬಿಲಿ ನಮಗೆ ಮತ್ತೊಮ್ಮೆ ಆರಂಭಿಸುವ ಅವಕಾಶವನ್ನು ನೀಡುತ್ತದೆ
ವರದಿ: ಲೀಸಾ ಝೆಂಗಾರಿನಿ
ಶನಿವಾರದ ತಮ್ಮ ಮೊದಲ ಜ್ಯೂಬಿಲಿ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿಯ ಕುರಿತು ಮಾತನಾಡಿ, ಜ್ಯೂಬಿಲಿ ಹೊಸದಾಗಿ ಆರಂಭಿಸಲು ನಮಗೆ ಮತ್ತೊಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ. ಇದು ದೇವರ ಸಾಮ್ರಾಜ್ಯದ ಪರಿವರ್ತಕ ಶಕ್ತಿಯನ್ನು ನಮಗೆ ತೋರಿಸುತ್ತದೆ ಹಾಗೂ ಭರವಸೆಯ ಮಹಾ ಪ್ರವಾದಿ ಸಂತ ಸ್ನಾನಿಕ ಯೊವ್ವಾನರ ಮಾದರಿಯನ್ನು ನಮಗೆ ತೋರಿಸುತ್ತದೆ ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ಎಂಬುದು ವರದಾನದ ಸಮಯವಾಗಿದ್ದು, ನಾವು ನಮ್ಮ ಬದುಕನ್ನು ಮತ್ತೊಮ್ಮೆ ಆರಂಭಿಸಲು ನಮಗೆ ನೆರವು ನೀಡುತ್ತದೆ. ಆದುದರಿಂದ ನಾವು ಈ ಸದವಕಾಶವನ್ನು ಉಪಯೋಗಿಸಿಕೊಳ್ಳುತ್ತಾ ಭರವಸೆಯಿಂದ ಆಧ್ಯಾತ್ಮಿಕ ಜೀವನವನ್ನು ನಡೆಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಸಾವಿರಾರು ಜನರಿಗೆ ಕಿವಿಮಾತನ್ನು ಹೇಳಿದ್ದಾರೆ.
ಮುಂದುವರೆದು ಪೋಪ್ ಫ್ರಾನ್ಸಿಸ್ ಅವರು ಸಂತ ಸ್ನಾನಿಕ ಯೊವ್ವಾನರ ಮಾದರಿಯ ಕುರಿತು ಮಾತನಾಡಿದರು. "ಸಂತ ಸ್ನಾನಿಕ ಯೊವ್ವಾನರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಭರವಸೆಯ ಮಹಾ ಪ್ರವಾದಿಯಾಗಿದ್ದಾರೆ. ದೇವರ ಸಾಮ್ರಾಜ್ಯದ ಕುರಿತು ಅವರು ಹೊಂದಿದ್ದ ಅಪ್ರತಿಮ ಭರವಸೆಯೇ ನಮ್ಮದಾಗಲಿ. ನಾವೆಲ್ಲರೂ ಅವರಿಂದ ಸ್ಪೂರ್ತಿಯನ್ನು ಪಡೆಯುವಂತಾಗಲಿ" ಎಂದು ಹೇಳಿದರು.
ಭರವಸೆ ಎಂಬುದು ದೇವರ ವರದಾನವಾಗಿದೆ. ನಾವು ನಮ್ಮ ಸಣ್ಣತನವನ್ನು ದೇವರ ಮುಂದೆ ಒಪ್ಪಿಕೊಳ್ಳಬೇಕು. ಸದಾ ದೇವರ ಮುಂದೆ ತಲೆಬಾಗಿ ಅವರ ಚಿತ್ತದ ಅನುಸಾರ ನಡೆಯಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಎಲ್ಲರಿಗೂ ಕರೆ ನೀಡಿದರು.