ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಪ್ರಭು ನಮಗೆ ಪ್ರತಿಕ್ರಿಯಿಸುತ್ತಾರೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಪೋಪ್ ಫ್ರಾನ್ಸಿಸ್ ಅವರು ಇಂದು ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ ಅವರು ಇಂದು ಕಾನಾ ಮದುವೆಯಲ್ಲಿ ದ್ರಾಕ್ಷಾರಸ ಮುಗಿದು ಹೋದಾಗ, ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸುವ ಮೂಲಕ ಅವರು ತಮ್ಮ ಮೊದಲ ಸೂಚಕಕಾರ್ಯವನ್ನು ಮಾಡಿದರು. ಅಂತೆಯೇ, ನಮ್ಮ ಬದುಕಿನಲ್ಲಿ ನಮಗೆ ಬೇಕಾದುದನ್ನು ಅವರ ಬಳಿ ನಾವು ಕೇಳಿದಾಗ, ಅವರು ನಮಗೆ ಅನುಗ್ರಹಿಸುತ್ತಾರೆ ಏಕೆಂದರೆ ಅವರು ನಮ್ಮೊಡನೆ ಸೇರಿ ಹರ್ಷಿಸಲು ಇಚ್ಛಿಸುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಇಂದಿನ ಯೊವ್ವಾನನ ಶುಭಸಂದೇಶದ ದೈವವಾಕ್ಯದ ಮೇಲೆ ಚಿಂತನೆಯನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್ ಅವರು "ನಾವು ನಮ್ಮ ಬದುಕಿನಲ್ಲಿ ಅನೇಕ ಬಾರಿ ಹಲವನ್ನು ಎದುರು ನೋಡುತ್ತೇವೆ. ಬಹುತೇಕ ಸಲ ನಮ್ಮಲ್ಲಿ ಅಗತ್ಯವಾಗಿರುವ ಅಂಶಗಳು ಇರುವುದಿಲ್ಲ. ಈ ಸಂದರ್ಭದಲ್ಲಿ ನಾವು ಪ್ರಾರ್ಥನೆಯಲ್ಲಿ ವಿಶ್ವಾಸದಿಂದ ಕೇಳಿದರೆ, ದೇವರು ನಮಗೆ ಕರುಣಿಸುತ್ತಾರೆ. ತಮ್ಮ ಅನಂತ ದಯೆ ಹಾಗೂ ಆಪರಿಮಿತತ್ವದಿಂದ ಅವರು ನಮಗೆ ಬೇಕಾದುದನ್ನು ಅನುಗ್ರಹಿಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.
"ನಮ್ಮಲ್ಲಿ ಯಾವುದೇ ಕೊರತೆಗಳಿದ್ದರು ಪ್ರಭು ಅವುಗಳನ್ನು ತುಂಬಲು ಸದಾ ಶಕ್ತರಾಗಿದ್ದಾರೆ ಹಾಗೂ ಉತ್ಸುಕರಾಗಿದ್ದಾರೆ. ಏಕೆಂದರೆ ನಮ್ಮ ಹರ್ಷ ಹಾಗೂ ಸಂತೋಷದಲ್ಲಿ ಪ್ರಭು ಪಾಲ್ಗೊಂಡು ಹರ್ಷಿಸಲು ಇಷ್ಟಪಡುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಇಂದು ತ್ರಿಕಾಲ ಪ್ರಾರ್ಥನೆಯಲ್ಲಿ ಹೇಳಿದ್ದಾರೆ.
ಇಂದು ಕಾನಾ ಮದುವೆಯಲ್ಲಿ ದ್ರಾಕ್ಷಾರಸ ಮುಗಿದು ಹೋದಾಗ, ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸುವ ಮೂಲಕ ಅವರು ತಮ್ಮ ಮೊದಲ ಸೂಚಕಕಾರ್ಯವನ್ನು ಮಾಡಿದರು. ಅಂತೆಯೇ, ನಮ್ಮ ಬದುಕಿನಲ್ಲಿ ನಮಗೆ ಬೇಕಾದುದನ್ನು ಅವರ ಬಳಿ ನಾವು ಕೇಳಿದಾಗ, ಅವರು ನಮಗೆ ಅನುಗ್ರಹಿಸುತ್ತಾರೆ ಏಕೆಂದರೆ ಅವರು ನಮ್ಮೊಡನೆ ಸೇರಿ ಹರ್ಷಿಸಲು ಇಚ್ಛಿಸುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಅಂತಿಮವಾಗಿ "ಜ್ಯೂಬಿಲಿ ವರ್ಷದಲ್ಲಿ ಮಾತೆ ಮರಿಯಮ್ಮನವರು ನಮ್ಮ ಜೊತೆಗಿದ್ದು, ನಮಗಾಗಿ ಸದಾ ಪ್ರಾರ್ಥಿಸುತ್ತಾರೆ" ಎಂದು ಹೇಳುತ್ತಾ ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯನ್ನು ಮುಗಿಸಿದರು.